Skip to main content

Posts

Showing posts from 2020

ಆಹಾ...! ಚಗಳಿ ಚಟ್ನಿ!!

 ಮಲೆನಾಡು ಹೇಗೆ ಹಸಿರಿಗೆ, ಸ್ವರ್ಗಸಮಾನ ಬೌಗೋಳಿಕ ರಚನೆಗೆ, ವಿಭಿನ್ನ- ವಿಶಿಷ್ಟ ಸಂಸ್ಕೃತಿಗೆ ಪ್ರಸಿದ್ದವೋ ಹಾಗೆಯೇ ವಿಶಿಷ್ಟ ಆಹಾರ ಪದ್ದತಿಗೂ ಪ್ರಸಿದ್ಧಿ.  ಮಲೆನಾಡಿನ ಋತುಮಾನಕ್ಕನುಗುಣವಾದ ಆಹಾರಗಳು ಸ್ಥಳೀಯ ಬದುಕಿನ ಅವಿಭಾಜ್ಯ ಅಂಗ. ಈ ಆಹಾರಗಳು ಕೇವಲ ನಾಲಿಗೆ ರುಚಿಗೆ ಮಾತ್ರ ಸೀಮಿತವಾಗದೇ ಮಲೆನಾಡಿಗರ ಆರೋಗ್ಯದ ಸಮತೋಲನಕ್ಕೂ ಅಪರಿಮಿತ ಕೊಡುಗೆ ನೀಡುತ್ತವೆ. ಇಲ್ಲಿ ಕಾಲಕ್ಕೆ ತಕ್ಕಂತೆ ಆಹಾರ ಕ್ರಮವಿದೆ, ಮಳೆಗಾಲಕ್ಕೊಂದು, ಚಳಿಗಾಲಕ್ಕೊಂದು, ಬೇಸಿಗೆಗೊಂದು ಖಾದ್ಯಗಳಿವೆ, ಅವನ್ನು ಆಯಾ ಕಾಲದಲ್ಲಿಯೇ ತಿನ್ನಬೇಕು. ಏಡಿ, ಕಳಲೆ, ಗದ್ದೆಮೀನು, ಕೆಸು, ಕೆಸುವಿನ ಗೆಡ್ಡೆ , ಅಣಬೆ, ಕಾಡುಗೆಣಸು, ಕಾಡು ಸೊಪ್ಪುಗಳು... ಹೀಗೆ.  ಅದೇ ರೀತಿ ಈ ಚಗಳಿಯ ಚಟ್ನಿ ಕೂಡಾ ನಮ್ಮ ಪ್ರಾಚೀನ ಆಹಾರ ಪದ್ದತಿಯ ಅತಿಮುಖ್ಯ ಖಾದ್ಯ.  ಚಗಳಿ(ಕೆಂಪು ಇರುವೆ) ಅಂದಾಕ್ಷಣ ಹಲವಾರು ಜನ 'ವ್ಯಾಕ್..' ಎಂದು ಮುಖ ಸಿಂಡರಿಸುವುದುಂಟು ಆದರೆ ಅದರ ರುಚಿ ಮತ್ತು ಔಷಧೀಯ ಗುಣಗಳನ್ನು ಮಲೆನಾಡಿಗರು ಮಾತ್ರ ಬಲ್ಲರು. ಬಿಸಿಲು ಏರುವ ಮೊದಲೇ ಜೋಪಾನವಾಗಿ ಮರದಿಂದ ಇಳಿಸಿದ ಚಗಳಿ ಕೊಟ್ಟೆಯನ್ನು ( ಗೂಡು) ಹುರಿದು ಚಟ್ನಿ ಮಾಡುವ ಮಲೆನಾಡಿನ ಮಹಿಳೆಯರ ಕೈಚಳಕಕ್ಕೆ ಅವರೇ ಸಾಟಿ. ಗದಗುಟ್ಟಿಸುವ ಚಳಿಗಾಲದಲ್ಲಿನ ಮಾಮೂಲಿ ಖಾಯಿಲೆಗಳಾದ ಶೀತ, ಜ್ವರ, ವೃದ್ಧರ ಕಫ ಮತ್ತು ಹಲವು ಸಮಸ್ಯೆಗಳಿಗೆ ಈ ಚಟ್ನಿ ರಾಮಬಾಣ.  ಅಯ್ಯೋ ಇರುವೆನೂ ತಿಂತೀರಾ... ! ಅಂತಾ ರಾಗ ಎಳ...
 ಕೆಲವರಿರುತ್ತಾರೆ. ನಮ್ಮ ಸುತ್ತಲೇ ಸುತ್ತುತ್ತಾ ನಾವು ಮಾಡಲು ಹೊರಡುವ ಕೆಲಸಗಳಲ್ಲೆಲ್ಲಾ ಹುಳುಕು ಹುಡುಕುತ್ತಾ, ಸಣ್ಣದಾಗಿ ವ್ಯಂಗ್ಯವಾಡುತ್ತಾ ನಮ್ಮ ಹುಮ್ಮಸ್ಸನ್ನೇ ಕಳೆದುಬಿಡುತ್ತಾರೆ.  ನನ್ನ ಸ್ನೇಹಿತನೊಬ್ಬನಿದ್ದ. ನಾನೇನು ಮಾಡಲು ಹೊರಟರೂ ಅಯ್ಯೋ ನಿಂಗೇನ್ ಹುಚ್ಚು ಮಾರಾಯಾ ಇಷ್ಟು ಬಂಡವಾಳ ಸುರಿದು ಇದನ್ನ್ಯಾಕೆ ಮಾಡೋಕೆ ಹೋದೆ !? ಇದು ನಮ್ಮಪ್ಪನಾಣೆ ಆಗುವಂತದ್ದಲ್ಲ ಬಿಡು ಬಿಡು... ಎಂದು ಅದೇನೋ ವ್ಯಂಗ್ಯವೋ, ವಿಕಾರವೋ ಆದ ಧಾಟಿಯಲ್ಲಿ ಶರಾ ಬರೆದುಬಿಡುತ್ತಿದ್ದ. ನಾನೋ ಸೋತು ಸುಣ್ಣವಾಗಿ ಏದುಸಿರು ಬಿಡುತ್ತಿದ್ದವನು, ಇವನ ಮಾತು ಕೇಳಿ ಒಳಗೇ ಮತ್ತೊಂದಷ್ಟು ಕುಸಿದು ಹೋಗುತ್ತಿದ್ದೆ. ಥತ್ ನಾನಿದನ್ನ ಮಾಡಬಾರದಿತ್ತಾ...? ಎಡವಿಬಿಟ್ಟೆನಾ...? ಎಂದೆಲ್ಲಾ ಯೋಚನೆಗೆ ಬೀಳುತ್ತಿದ್ದೆ. ನನ್ನ ಗ್ರಹಚಾರವೋ ಮತ್ತಿನ್ನೇನು ಸುಡುಗಾಡೋ ಮಾಡುತ್ತಿದ್ದ ಕೆಲಸಗಳೂ ಕಡೇ ಹಂತದಲ್ಲಿ‌ ನೆಗೆದುಬೀಳುತ್ತಿದ್ದವು.  ಕಡೆ ಕಡೆಗೆ ನನ್ನ ಪ್ರತಿಯೊಂದು ಕೆಲಸದಲ್ಲಿಯೂ ಅವನು ನೆಗೆಟಿವ್ ಒಪೀನಿಯನ್'ಗಳನ್ನು ಹೇರತೊಡಗಿದಾಗ ನನಗೆ ಉಸಿರುಗಟ್ಟತೊಡಗಿ ಒಂದು ದಿನ ಇಂಥದ್ದೇ ಯಾವುದೇ ವಿಚಾರದಲ್ಲಿ‌ ಕಂಡಾಪಟ್ಟೆ ಜಗಳಾಡಿ ದೂರ ಸರಿಸಿಬಿಟ್ಟೆ. ಅದೇನೋ ಅವತ್ತಿನಿಂದ ಬೆನ್ನು ಹತ್ತಿದ್ದ ಬೇತಾಳವನ್ನು ಕೆಳಗೆ ಜಾಡಿಸಿದಂತಹ ಹಗುರ ಭಾವ.!  ಇಂತಹ ಹತ್ತಾರು ಜನ ನಮ್ಮ ಸುತ್ತಲಿರುತ್ತಾರೆ ಇಂಥವರನ್ನು ಸಾಧ್ಯವಾದಷ್ಟು ಕೊಡವಿ ದೂರವಿಡುವುದು ನಮ್ಮ ಮನಸ್ಸಿನ ಆರ...
ಶಿವಮೊಗ್ಗ ಬಿಟ್ಟಾಗ ಏಳೂವರೆ. ಒಂದು ಗಂಟೆಯಲ್ಲಿ ನಾನು ಕಡೂರು ತಲುಪಬೇಕಿತ್ತು. ಒಂದಷ್ಟು ಮೆಟೀರಿಯಲ್ಲುಗಳನ್ನು ತುರ್ತಾಗಿ ಫಾರ್ಮ್ ಗೆ ತಲುಪಿಸಬೇಕಿತ್ತು.  ಕಾರಿನ ಸ್ಪೀಡನ್ನು ಎಂಬತ್ತು - ನೂರರ ಮಧ್ಯದಲ್ಲಿರಿಸಿಕೊಂಡು ಬಂದರೂ ಗುಂಡಿಬಿದ್ದ ರಸ್ತೆಯಲ್ಲಿ ಡ್ರೈವ್ ಮಾಡುವುದು ನರಕ ಯಾತನೆ ಎನಿಸುತ್ತಿತ್ತು. ಅಂತೂ ಒಂಬತ್ತು ಗಂಟೆಗೆ ಫಾರ್ಮ್ ತಲುಪಿ ಮೆಟೀರಿಯಲ್ ಇಳಿಸಿ ಮನೆ ಕಡೆ ಹೊರಟೆ. ಮತ್ತೆ ನಲವತ್ತು ಕಿಮಿ ಡ್ರೈವ್ ಮಾಡಬೇಕು. ಬೆಳಗ್ಗೆಯಿಂದ ಬಿಡುವಿಲ್ಲದ ಕೆಲಸಗಳಿಂದಾಗಿ ಸಣ್ಣಗೆ ಜ್ವರ ಏರುತ್ತಿತ್ತು. ಮತ್ತೆ ಗಾಡಿಯ ವೇಗಕ್ಕೆ ತಿದಿಯೊತ್ತಿದೆ. ಚಿಕ್ಕಮಗಳೂರು ಇನ್ನೇನು ಹದಿನೈದು ಮೈಲಿ ದೂರವಿದೆ ಎನ್ನುವಷ್ಟರಲ್ಲಿ ತಿರುವೊಂದರಲ್ಲಿ ಘಕ್ಕನೇ ಬ್ರೇಕು ಒತ್ತಿದೆ. ಎದುರಿನಲ್ಲಿ ಟಾಟಾ ಏಸ್ ಒಂದು ಬೈಕ್ ಗೆ ಗುದ್ದಿ ಬೈಕಿನಲ್ಲಿದ್ದವರು ಕೆಳಗೆ ಬಿದ್ದಿದ್ದರು. ಅಪಘಾತವಾಗಿ ಹೆಚ್ಚೆಂದರೆ ಐದು ನಿಮಿಷವಾಗಿತ್ತೇನೋ... ತಕ್ಷಣ ಕಾರು ಇಳಿದು ಓಡಿ ಹೋಗಿ ಎತ್ತಿದೆ. ಬಹುಶಃ ಗಂಡ-ಹೆಂಡತಿ ಇರಬೇಕು... ತಲೆಯಿಂದ ರಕ್ತ ಸುರಿಯುತ್ತಿತ್ತು, ಕೈಕಾಲುಗಳು ಕಿತ್ತು ಹೋಗಿದ್ದವು. ಆಸ್ಪತ್ರೆಗಾದರೂ ತಲುಪಿಸೋಣ ಅಂದುಕೊಂಡು ಕರೆತಂದು  ಕಾರಿನೊಳಗೆ ಕೂರಿಸಿದೆ.  ಕಾರು ಹೊರಟಮೇಲೆ ಸಣ್ಣಗೆ ನರಳತೊಡಗಿದರು. ಬಹುಶಃ ನೋವಿಗಿರಬಹುದು. ಕನ್ನಡಿ ನೋಡಿದೆ, ಆಕೆಯ ಕಣ್ಣು ಕತ್ತಲಿನಲ್ಲೂ ಕೆಂಪಗೆ ಹೊಳೆಯುತ್ತಿದ್ದವು. ಬಹುಶಃ ಭಯಕ್ಕೆ ಹಾಗಾಗಿರಬಹುದು ಎಂದುಕೊಂಡೆ....
 ಇಡೀ ಬಸ್ಸಲ್ಲಿ ಒಬ್ಬರೇ ಒಬ್ಬರು ಪತ್ರಿಕೆ ಓದುತ್ತಿದ್ದರು. ಓದಿದ ನಂತರ ಮಡಚಿ ಬ್ಯಾಗಿಗಿಟ್ಟುಕೊಂಡರು. ಪಕ್ಕ ಕುಳಿತವರ‌್ಯಾರೂ ಬಗ್ಗಿ ಕಣ್ಣು ಹಾಯಿಸಲಿಲ್ಲ, ಯಾರೂ ಸಾಲ ಕೇಳಲಿಲ್ಲ.!  ನಾವು ಮೊಬೈಲು, ಅಂತರ್ಜಾಲದ ವ್ಯಸನಿಗಳಾಗುವುದಕ್ಕೂ ಮುಂಚೆ ಹೇಗೆ ಪತ್ರಿಕೆ, ಪುಸ್ತಕಗಳೊಂದಿಗೆ ಬೆಸೆದುಕೊಂಡಿದ್ದೆವು ಮತ್ತು ಈಗ ಹೇಗೆ ಓದಿನಿಂದ ವಿಮುಖರಾಗಿದ್ದೇವೆ  ಎಂಬುದಕ್ಕೆ ಆಗಾಗ ಇಂತಹ ಸಣ್ಣ ಸಣ್ಣ ಉದಾಹರಣೆಗಳು ಕಣ್ಣಿಗೆ ಬೀಳುತ್ತವೆ.  ಹಿಂದೆಲ್ಲಾ ಒಬ್ಬ ವ್ಯಕ್ತಿ ಪತ್ರಿಕೆ ಹಿಡಿದು ಬಸ್ಸು ಹತ್ತಿದರೆ ಆ ಪತ್ರಿಕೆ ಇಡೀ ಬಸ್ಸನ್ನು ಸುತ್ತಿ ಬರುತ್ತಿತ್ತು.  ಯಾರಾದರೂ ಓದುತ್ತಿದ್ದರೆ ಪಕ್ಕದಲ್ಲಿ ಕುಳಿತವರು ಕೊಕ್ಕರೆಯಂತೆ ಕತ್ತು ಉದ್ದ ಮಾಡಿ ಓದಲು ಯತ್ನಿಸುತ್ತಿದ್ದರು. ಹಿಂದಿನ ಸೀಟಿನವನು ಸೀಟಿನ ಸಂದಿಯಲ್ಲಿ ಒಂದೇ ಕಣ್ಣಿಟ್ಟು ಇಣುಕುತ್ತಿದ್ದನು, ಬಸ್ಸು ಎಷ್ಟೇ ತುಂಬಿ ತುಳುಕುತ್ತಿದ್ದರೂ ನಿಂತ ಜಾಗದಲ್ಲಿಂದಲೇ ತಿರುಗಾ ಮುರುಗಾ ಹೊರಳಿ ಓದುವ ಪ್ರಯತ್ನ ಮಾಡುತ್ತಿದ್ದರು.  ಪತ್ರಿಕೆಯ ಪುಟಗಳು ಹತ್ತುಕಡೆ ಹಂಚಿಕೊಂಡು ಓದಿಸಿಕೊಳ್ಳುತ್ತಿದ್ದವು.  ಸಣ್ಣ ಬಸ್ ನಿಲ್ದಾಣದಲ್ಲೂ ಪುಸ್ತಕದಂಗಡಿ ಇರುತ್ತಿತ್ತು,  ಬಹುತೇಕ ಮಧ್ಯಮ ವರ್ಗದ ಮನೆಗಳಲ್ಲಿ ಯಾವುದಾದರೂ ಒಂದು ದಿನಪತ್ರಿಕೆಯೋ, ವಾರಪತ್ರಿಕೆಯೋ, ಪಾಕ್ಷಿಕವೋ ಇರುತ್ತಿತ್ತು.  ಅದೇ ಇವತ್ತು ಬಸ್ಸು ಹತ್ತಿದರೆ ಪ್ರತಿಯೊಬ್ಬರ ಕೈಲೂ ಮೊಬೈಲು ಮಿಣಗುಟ್ಟ...

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...

ಬೊಂಬಾಯಿ ಕಥೆ

ಶ್ರೀನಿವಾಸಣ್ಣ ಬೊಂಬಾಯಿಯಿಂದ ಬಂದಿದ್ದ ಸತೀಶನನ್ನು ಬ್ಯೆರಸಾಡಿ ಬೆನ್ನು ಹುಡಿಯಾಗುವಂತೆ ಹೊಡೆದರಂತೆ ಎಂಬುದು ಊರಲೆಲ್ಲಾ ದೊಡ್ಡ ಸುದ್ದಿಯಾಯಿತು.  ಯಾವತ್ತೂ ಯಾರೊಂದಿಗೂ ಜಗಳ ,ಕುಸ್ತಿ ಮಾಡಿಕೊಳ್ಳದ ಈ ಶ್ರೀನಿವಾಸಣ್ಣ ಯಾಕೆ ಆ ಹುಡುಗನೊಂದಿಗೆ ಜಗಳಕ್ಕೆ ಹೋದರು ಎಂಬುದೇ ಹಲವರಿಗೆ ಆಶ್ಚರ್ಯ.! ಶ್ರೀನಿವಾಸಣ್ಣ ಹೊಡೆದಿದ್ದು ನಿಜವಾದರೂ ಬೆನ್ನು ಪುಡಿಯಾಗಿತ್ತೋ ಅಥವಾ ಪೋಲಿಸರಿಗೆ ದೂರು ಕೊಡುವಾಗ ಸಾಕ್ಷಿಗೆ ಬೇಕಾಗುತ್ತದೆ ಎಂದು ಯಾರೊ ಸತೀಶನಿಗೆ ಉಪಾಯ ಹೇಳಿಕೊಟ್ಟರೋ ಏನು ಕತೆಯೊ...! ಸತೀಶ ಹೋಗಿ ಆಸ್ಪತ್ರೆ ಸೇರಿಕೊಂಡು ಮೈಗೆಲ್ಲಾ ಬ್ಯಾಂಡೇಜು ಸುತ್ತಿಸಿಕೊಂಡ.  ಯಾವತ್ತೂ ಗಲಾಟೆ ವಿವಾದಗಳಿಗೆ ಸ್ಟೇಷನ್ನಿನ ಮೆಟ್ಟಿಲು ಹತ್ತದ  ಊರಿನ ಜನ ಇದು ಯಾಕೋ ವಿಪರೀತಕ್ಕೆ ಹೋಗುತ್ತಿದೆ ಎಂದೆನಿಸಿ 'ಪೊಲೀಸು ಗೀಲೀಸು ಎಲ್ಲಾ ಬ್ಯಾಡಾ ಪಂಚಾಯ್ತಿ ಸೇರ್ಸಿ ಇತ್ಯರ್ಥ ಮಾಡನಾ...' ಎಂದು ಮಾತನಾಡಿಕೊಂಡು ಒಂದು ಬೆಳಿಗ್ಗೆ ಪಂಚಾಯ್ತಿ ಕರೆದರು.  ಪಂಚಾಯ್ತಿಗೆ ಕುಳಿತಿದ್ದವರು 'ಸ್ರೀನಾಸಣ್ಣ ಅದ್ಯಾಕ್ಹಂಗೆ ಕಂಡಾಪಟ್ಟೆ ಹೊಡುದ್ರೀ... ಯಂತ ವಿಚಾರಾ...? ' ಎಂದು ಶ್ರೀನಿವಾಸಣ್ಣನ ವಿಚಾರಣೆ ಪ್ರಾರಂಭಿಸಿದರು.  ಶ್ರೀನಿವಾಸಣ್ಣ ಹಲ್ಲು ಕಡಿಯುತ್ತಾ " ಈ ಹೆದ್ಲಿಮಗ್ನಿಗೆ ಎಷ್ಟು ಛರ್ಬಿ ಇರ್ಬಕು, ಏನಾ ಸುಮಾರ್ ವರ್ಸಾಗಿತ್ತು ನೋಡಿ ಬೊಂಬಾಯಿಂದ ಬಂದಾನೆ ಅಂತಾ ಕರ್ದು ಮಾತಾಡ್ಸಿದ್ರೆ ನನ್ನೇ ನಾಯಿ ಅಂತಾ ಬೈದ ಬೋಳಿಮಗ, ದಾರಿಲಿ ಹೋಗಬರರಿಗೆಲ್ಲಾ...
 ಎರಡು ವರ್ಷಗಳ ಹಿಂದೆ ನಾವು ವಿರಾಜಪೇಟೆಯಿಂದ ಇರಿಟ್ಟಿ ಎನ್ನುವ ಕೇರಳದ ಗಡಿಭಾಗದ ಊರಿಗೆ ಹೋಗಿದ್ದೆವು. ಕರ್ನಾಟಕದ ಗಡಿ ದಾಟುತ್ತಿದ್ದಂತೆಯೇ ಎಲ್ಲಿ ನೋಡಿದರಲ್ಲಿ ಗುಡ್ಡ , ಕಾಡು ಕಡಿದು ಕಟ್ಟಡಗಳ ನಿರ್ಮಾಣ, ಗೆರೆ ಅಗೆದು ರಸ್ತೆ ಅಗಲೀಕರಣ, ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆಯ ಕಣಿವೆಗೆ ರಸ್ತೆ ವಿಸ್ತರಣೆಯ ತಡೆಗೋಡೆ ನಿರ್ಮಾಣ ನಡೆಯುತ್ತಿತ್ತು. ಕಣಿವೆಯಾಚೆಗಿನ ಗುಡ್ಡವನ್ನು ಇನ್ಯಾವುದೋ ಕಾಮಗಾರಿಗಾಗಿ ಜೆಸಿಬಿಗಳು ಬಗೆಯುತ್ತಿದ್ದವು. ಇನ್ನೊಂದು ಬದಿಯಲ್ಲಿ ರಬ್ಬರ್ ತೋಟಗಳು. ನದಿಯ ಕಣಿವೆಯ ಅಂಚಿಗೇ ಮನೆಗಳು, ಅಂಗಡಿ-ಹೋಟೆಲುಗಳು. ಒಟ್ಟಾರೆಯಾಗಿ ಆ ಇಡೀ ಪರಿಸರ ಒಂದು ರೀತಿಯ ಕೃತಕ ನಿರ್ಮಾಣದ ಧಾವಂತಕ್ಕೆ ಬಿದ್ದಂತೆ ತೋರುತ್ತಿತ್ತು.  ಕೇರಳದ ಆ ಊರು ಮನುಷ್ಯನ ಕೈಚಳಕಕ್ಕೆ ಸಿಕ್ಕಿ ಚಿತ್ರವಿಚಿತ್ರ ರೂಪ ಪಡೆಯುತ್ತಿರುವ ಪಶ್ಚಿಮ ಘಟ್ಟದ ಪ್ರತಿನಿಧಿಯಂತೆ ಗೋಚರವಾಗುತ್ತಿತ್ತು.  ಇವತ್ತು ಮಾನವ ಕೇಂದ್ರಿತ ವ್ಯವಸ್ಥೆಯು ಪ್ರಕೃತಿಯ ಮೇಲೆ ಹೊಸ ಹೊಸಾ ಆವಿಷ್ಕಾರಗಳ ಪ್ರಯೋಗಗಳನ್ನು ಎಗ್ಗಿಲ್ಲದೇ ನಡೆಸುತ್ತಿದೆ.  ಇದೊಂತರಾ ತಾಯಿಯ ಎದೆಯೊಳಗೆ ಕೃತಕ  ಹಾಲನ್ನು ಸಿರಿಂಜಿನ ಮೂಲಕ ಒಳಸೇರಿಸಲು ಪ್ರಯತ್ನಿಸಿದಂತೆ.!  ಇದಕ್ಕೆ ಆಧುನಿಕ ವಿಜ್ಞಾನ ಎಂದು ಹೆಸರು.!  ಇದರ ಹೆಸರಿನಲ್ಲಿಯೇ ಭೂ ರಚನೆಯ ವಿರುದ್ಧವಾಗಿ ರಸ್ತೆ, ಕೆನಲ್ ,  ಸುರಂಗ ಮಾರ್ಗ, ಅತಿ ಭಾರದ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ಅವೈಜ್...

ಅಂತರಂಗದ ಕೊಳಕಿಗೆ ಬಹಿರಂಗದಲ್ಲಿ ಮದ್ದಿಲ್ಲ...!

ಇತ್ತೀಚೆಗೆ  ತಾರತಮ್ಯದ ಕುರಿತಾಗಿ ಒಂದು ಚರ್ಚೆ.  ಹಿಂದಿನ ಕಾಲದಲ್ಲಿ ಮೇಲ್ಜಾತಿಯವರು ಕೆಳಜಾತಿಯವರಿಗೆ ಕುರೂಪಿ ಹೆಸರುಗಳನ್ನಿಡುತ್ತಿದ್ದರು ಎಂಬುದು ಚರ್ಚೆಯ ವಸ್ತು.  ಬ್ರಾಹ್ಮಣರು ತಮ್ಮ ಮಕ್ಕಳಿಗಾದರೆ ಶ್ಯಾಮ, ವಿನಾಯಕ, ಗಣೇಶ, ರಾಘವೇಂದ್ರ, ಮಂಜುನಾಥ ಎಂದೆಲ್ಲಾ ಚೆಂದದ ಹೆಸರಿಟ್ಟು, ತಮ್ಮಲ್ಲಿಗೆ ನಾಮಕರಣದ ಮನವಿ ಹೊತ್ತು ಬರುತ್ತಿದ್ದ ತಮಗಿಂತಾ ಕೆಳಜಾತಿಯವರಿಗೆ ಸಣ್ಣೇಗೌಡ, ದೊಡ್ಡೇಗೌಡ, ಗಿಡ್ಡೇಗೌಡ, ಉದ್ದೇಗೌಡ ಎಂಬುದಾಗಿಯೂ, ಬಂದವರು ದಲಿತರಾಗಿದ್ದಲ್ಲಿ ಕರಿಯ, ಬಿಳಿಯ, ಸಣ್ಣ, ದೊಡ್ಡ ಅಂತಲೂ ಹೆಸರು ಸೂಚಿಸುತ್ತಿದ್ದರು ಹೀಗಾಗಿ ನಮಗೆಲ್ಲಾ ಕೆಟ್ಟ ಹೆಸರು ಅವರಿಗೆ ಮಾತ್ರ ಚೆಂದದ ಹೆಸರು. ಇದೂ ಕೂಡಾ ಜಾತಿ ತಾರತಮ್ಯದ ಒಂದು ಶೋಷಣೆ ಎಂಬುದು ಅವತ್ತಿನ ಚರ್ಚೆ.  ಇರಬಹುದೇನೋ... ಆದರೆ ಇವತ್ತಿನ ಕಾಲಕ್ಕೆ ಆ ವಾದ ಅಪ್ರಸ್ತುತ. ಕಾರಣ, ಈಗ ಬಹುತೇಕರು ತಮ್ಮ ಮಕ್ಕಳಿಗೆ ಅವರವರೇ ಹೆಸರಿಟ್ಟುಕೊಳ್ಳುತ್ತಾರೆ ಮತ್ತು ಚೆಂದದ ಹೆಸರಿಟ್ಟುಕೊಳ್ಳುತ್ತಾರೆ. ಕೆಲವು ಹೆಸರುಗಳಿಗಂತೂ ಯಾವ ವ್ಯಾಕರಣ ಗ್ರಂಥ ಹುಡುಕಿದರೂ ಅರ್ಥ ಸಿಗಲಾರದು.!  ಇನ್ನು ಕೆಲವು ಹೆಸರುಗಳು ಕೇಳಿದ ಐದು ನಿಮಿಷಕ್ಕೆ ಮರೆತೇ ಹೋಗಿಬಿಡುತ್ತವೆ. ಮತ್ತೆ ಕೆಲವು ಉಚ್ಚರಿಸಲೇ ಹರಸಾಹಸ ಪಡಬೇಕು. ಹೀಗಾಗಿ ಈಗ ಕರಿಯ, ಬಿಳಿಯ, ಗಿಡ್ಡ ಎಂಬ ಹೆಸರುಗಳೆಲ್ಲಾ ಇತಿಹಾಸ ಸೇರಿಕೊಳ್ಳುತ್ತಿವೆ.  ಬ್ರಾಹ್ಮಣರು ಅದೆಷ್ಟು ಮಕ್ಕಳಿಗೆ ಹೆಸರಿಟ್ಟರೋ ತಿಳಿಯದು, ಆದರೆ ನ...
ದೊಡ್ಡ ಮರವೊಂದರ ಒಣಗಿದ ಕೊಂಬೆಯ ತುದಿಯಲ್ಲಿ ಕುಳಿತು ಕೆಳಗಿನ ಹಳ್ಳದಲ್ಲಿ ಒಂದು ಮೀನಾದ್ರೂ ಮೇಲೆ ಬರುತ್ತೇನೋ ಎಂದು ಕಾಯುತ್ತಾ ಕುಳಿತಿರುತ್ತಿದ್ದ ಬೆಳ್ಳಕ್ಕಿಯೊಂದು ಕೆಳಗೆ ರಾಜಾರೋಷದಿಂದ ಓಡಾಡುತ್ತಾ ಶಿಕಾರಿ ಮಾಡುತ್ತಿದ್ದ ಹುಲಿಯನ್ನು ದಿನವೂ ನೋಡುತ್ತಾ ಹುಟ್ಟಿದ್ರೆ ಹುಲಿಯಾಗಿ ಹುಟ್ಬೇಕ್ ಗುರೂ ಎಂಥಾ ಸೌಭಾಗ್ಯನಪ್ಪಾ ಈ ಹುಲೀದೂ ಇಡೀ ಕಾಡೇ ಹೆದ್ರಿ ನಡುಗುತ್ತೆ ನಾನು ಒಂದು ಮೀನು ಹಿಡಿಯೋಕೆ ಈ ಒಣಗಿದ ಕೊಂಬೆಯ ತುದೀಲಿ‌ ಬಿಸಿಲಲ್ಲಿ ಕಾಯ್ತಾ ಕೂರ್ಬೇಕು ಯಾರಿಗ್ ಬೇಕು ಈ ಕರ್ಮ ಮುಂದಿನ್ ಜನ್ಮದಲ್ಲಾದ್ರೂ ನನ್ನನ್ನ ಹುಲಿಯಾಗಿ ಹುಟ್ಸಪ್ಪಾ ದೇವ್ರೇ... ಎಂದು ದಿನವೂ ಬೇಡಿಕೊಳ್ಳುತ್ತಿತ್ತು.  ಇತ್ತ ಹುಲಿ ಬಿರು ಬಿಸಿಲಿನಲ್ಲಿ ಕಾಡೆಲ್ಲಾ ಅಲೆದಾಡಿ ಸುಸ್ತಾಗಿ ಬಂದು ಮರದಡಿ‌ ಮಲಗಿಕೊಂಡು ಮರದ ತುತ್ತ ತುದಿಯಲ್ಲಿ ಕುಳಿತು ಇಡೀ ಕಾಡನ್ನು ನೋಡುವ ಬೆಳ್ಳಕ್ಕಿಯನ್ನೇ ದಿನವೂ ದಿಟ್ಟಿಸುತ್ತಾ ' ಥೂ ಏನ್ ಹಾಳ್ ಜನ್ಮ ಗುರೂ ದಿನ ಬೆಳಗೆದ್ರೆ ಹೊಟ್ಟೆ ತುಂಬಿಸ್ಕಳಕೆ ಎಷ್ಟೆಲ್ಲಾ ಒದ್ದಾಡ್ಬೇಕು ಅದೇ ಈ ಬೆಳ್ಳಕ್ಕಿ ಯಾರ ಕೈಗೂ ಸಿಗದಂಗೆ ಅಷ್ಟೆತ್ತರದಲ್ಲಿ ಕೂತ್ಕಂಡು ಎಷ್ಟು ಸುಲಭವಾಗಿ ಮೀನು ಹಿಡಿಯುತ್ತಪ್ಪಾ... ಮುಂದಿನ್ ಜನ್ಮ ಅಂತಿದ್ದರೆ ಬೆಳ್ಳಕ್ಕಿಯಾಗಿ ಹುಟ್ಸಪ್ಪಾ ದೇವ್ರೇ... ಎಂದು ಕೇಳಿಕೊಳ್ಳುತ್ತಿತ್ತು.!  ಮನುಷ್ಯನ ಆಲೋಚನೆಗೆ ಸಣ್ಣದೊಂದು ಉದಾಹರಣೆಯಷ್ಟೇ ಇದು. ನಾವು ನಮಗಿರುವ ಕಷ್ಟಗಳನ್ನು ನೆನೆದು ಅದರಿಂದ ಹೊರಬರಲಾಗದೇ ದಿನವೂ ಒಳಗ...

ಮೊದಲ ಮಳೆಯ ಹೊತ್ತಿಗೆ ಹಳೆಹಳೆಯ ನೆನಪುಗಳು

ಬೆಳಿಗ್ಗೆಯೇ ಚಿಕ್ಕಮಗಳೂರಿನಲ್ಲಿ ಸಣ್ಣಗೆ ಮಳೆ.  ನಾವು ಮಲೆನಾಡಿಗರಿಗೆ ಮಳೆ ಬಂತೆಂದರೆ ಮನದ ಮೂಲೆಯಲ್ಲೆಲ್ಲೋ ಅಡಗಿ ಕುಳಿತ ನವಿರು ನೆನಪುಗಳಿಗೆ ಚಿಗುರು ಬಂದುಬಿಡುತ್ತದೆ. ಅದರಲ್ಲೂ ಊರು ಬಿಟ್ಟು ಹೊರಗೆಲ್ಲೋ ನೆಲೆಸಿದವರಿಗಂತೂ ಸಣ್ಣಗೆ ಸೆಳೆತ ಪ್ರಾರಂಭ. ಅಂದಹಾಗೆ ಮೇ ಮಧ್ಯಭಾಗಕ್ಕೇ ಮಳೆ ಶುರುವಾಗುವ ಪರಿಪಾಠ ನಿಂತು ಹೋಗಿ ಹತ್ತಿರತ್ತಿರ ದಶಕವೇ ಕಳೆದು ಹೋಯ್ತೇನೋ...? ಈಗೇನಿದ್ದರೂ ಜುಲೈ ಹತ್ತರ ನಂತರವೇ ಪೂರ್ಣಪ್ರಮಾಣದ ಮಳೆಗಾಲದ ಶುರುವಾತು ಅನಿಸಿಬಿಟ್ಟಿದೆ. ತೊಂಬತ್ತರ ದಶಕದಲ್ಲಿ ಬಿರು ಬೇಸಿಗೆ ದಿನಗಳು ಮುಗಿದು ಮೇ ಹದಿನೈದು ದಾಟಿದ ತಕ್ಷಣ  ಇದ್ದಕ್ಕಿದ್ದಂತೆ ಪ್ರಕೃತಿಯಲ್ಲಿ ದೊಡ್ಡದೊಂದು ಬದಲಾವಣೆ ಕಾಣಿಸಿಕೊಳ್ಳುತ್ತಿತ್ತು.  ಕಾರ್ಮೋಡಗಳು ಗಡಿಬಿಡಿಯಿಂದ ಅತ್ತಿಂದಿತ್ತ ಚಲಿಸುತ್ತಾ ಕಣ್ಣು ಕುಕ್ಕುತ್ತಿದ್ದ ಬಿರು ಬಿಸಿಲನ್ನು ಹಠಾತ್ತನೆ ತನ್ನೊಳಗೆ ಅಂತರ್ಗತಗೊಳಿಸಿಕೊಂಡು ಗವ್ವನೆ ಕತ್ತಲು ಕವಿದಂತಾಗಿ  ಪಟಾರನೆ ಸಿಡಿಲು ಬಡಿದು ಸಣ್ಣಗೆ ಮಳೆ ಉದುರಾಡತೊಡಗಿತೆಂದರೆ ಬೇಸಿಗೆಯ ಬೇಗೆಗೆ ಬಸವಳಿದು ಬೆವರು ಬಸಿಯುತ್ತಾ ಹೆಬ್ಬಾವಿನಂತೆ ಬಿದ್ದುಕೊಂಡಿರುತ್ತಿದ್ದ ಮಲೆನಾಡು ಧಿಗ್ಗನೆದ್ದುಕುಳಿತು ಧಾವಂತಕ್ಕೆ ಬೀಳುತ್ತಿತ್ತು. ಮಲೆನಾಡಿಗರಂತೆಯೇ ಅಂಗಳದ ಮೂಲೆಯಲ್ಲಿ ಸೋಮಾರಿಯಂತೆ ಬಿದ್ದಿರುತ್ತಿದ್ದ ಸೌದೆಯನ್ನು ಲಗುಬಗೆಯಿಂದ ಕೊಟ್ಟಿಗೆಗೆ ಒಟ್ಟುವ ಗಡಿಬಿಡಿ. ಮನೆಗೊಂದರಂತೆ ವಾಹನಗಳಿರದಿದ್ದ ಅವತ್ತಿನ ಕಾಲಕ್ಕೆ ಮಳೆಗಾಲ...

ಅಂದಕಾಲದ ಕಥೆ-ವ್ಯಥೆಗಳು

ಬೆಂಗಳೂರಿಗೆ ಹೊರಡುವ ಬಹುತೇಕ ನಿರುದ್ಯೋಗಿಯ ಚಿಂತೆ ಕೆಲಸ ಸಿಗುತ್ತದಾ ?  ಎನ್ನುವುದಕ್ಕಿಂತ ಉಳಿಯಲು ಕೊಠಡಿ ಸಿಗುತ್ತದಾ ? ಎನ್ನುವುದು. ಕಾರಣ ಪುಡಿಗಾಸು ಇಟ್ಟುಕೊಂಡು ಹೊರಡುವ ಹುಡುಗರು (ಬಹುತೇಕ ಹುಡುಗಿಯರು ಅದರಲ್ಲಿ ಜಾಣೆಯರು. ಕೆಲಸ , ಕೋಣೆಯನ್ನು  ಖಚಿತ ಪಡಿಸಿಕೊಂಡೇ ಹೊರಡುತ್ತಾರೆ.! ) ಸ್ವಂತದ ಕೋಣೆ ಬಾಡಿಗೆ ಪಡೆಯುವಷ್ಟು ಶಕ್ತಿಯಿರುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಕೆಲಸ ಹುಡುಕಿ ಹೊರಡುವುದು ಒಂದು ರೀತಿಯ ಅನಿಶ್ಚಿತತೆಯ ಪ್ರಯಾಣ. ಇನ್ನು ಈ ಪ್ರಾಣಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದೆ ಎಂಬ ಮಾಹಿತಿ ಮೊದಲೇ ಬೆಂಗಳೂರಿಗೆ ಹೋಗಿ ಸೇರಿಕೊಂಡವರಿಗೆ ತಿಳಿದರೆ ಅವರು ಸತ್ತರೂ ಫೋನ್ ರಿಸೀವ್ ಮಾಡುವುದಿಲ್ಲ. ಇನ್ನು ಕೆಲವರು ಕರೆ ಮಾಡಿದಾಗಲೆಲ್ಲಾ ರೂಮಿಗೇ ಬರದೇ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಲೇ ಇರುತ್ತಾರೆ.! ಬಹುತೇಕ ಹುಡುಗರಿಗೆ ಸುಳ್ಳಿನ ಸರಪಳಿ ಅನಿವಾರ್ಯವಾಗಿದ್ದರೆ ಇನ್ನು ಕೆಲವರಿಗೆ ಊರಿನ ಮತ್ತೊಂದು ಮಿಕ ಬೆಂಗಳೂರು ಸೇರಿ ಉದ್ದಾರಾಗುವುದು ಹೊಟ್ಟೆ ಉರಿಯ ಮ್ಯಾಟರ್ರು. ಬೆಂಗಳೂರಿಗೆ ಹೋದ ಹೊಸತು. ಹೋಗುವ ಮೊದಲು ನಾಗಮಂಗಲ ಕಡೆಯ ಗೆಳೆಯನೊಬ್ಬನ ಕೋಣೆಯನ್ನು ಖಚಿತ ಪಡಿಸಿಕೊಂಡಿದ್ದೆ. 'ಅಯ್ಯೋ ಬಾ ಮಗಾ ನಾನಿದೀನಿ...' ಎಂದು ಥೇಟ್ ಕೃಷ್ಣ ಪರಮಾತ್ಮನ ಶೈಲಿಯಲ್ಲಿ ಅಭಯ ನೀಡಿದ್ದ. ಹೋಗಿ  ಇಳಿದ ನಂತರ ಆ ದರವೇಸಿಗೆ ಅದೇನಾಯ್ತೋ ಮುಖ ಗಂಟು ಹಾಕಿಕೊಂಡೇ ಸುಂಕದ ಕಟ್ಟೆಯಾಚೆಗಿನ ಅವನ ಮನೆಗೆ ಕರೆದುಕೊಂಡು ಹೋದ. ...

ನಿಮ್ಮ ಬ್ರೈನ್ ಆರೋಗ್ಯವಾಗಿದೆಯಾ...!?

ಸಣ್ಣದೊಂದು ಟೆಸ್ಟ್! ನಿಮಗೆ ಇತ್ತೀಚೆಗೆ ಎಷ್ಟು ಜನರ ಮೊಬೈಲ್ ನಂಬರ್ ಗಳು ನೆನಪಿವೆ ? ಬೆಂಗಳೂರಿನಂತಹ ನಗರದ ಒಂದು ಸಲ ಹೋಗಿದ್ದ ಯಾವುದೋ ಬಡಾವಣೆಯ ಯಾವುದೊ ರಸ್ತೆಯ ವಿಳಾಸ ಹಲವು ತಿಂಗಳ ನಂತರ ಮತ್ತೆ ಹೋಗಲೆಂದು ನೆನಪಿಸಿಕೊಂಡರೆ ನೆನಪಾಗುತ್ತದಾ ? ಫೇಸ್ಬುಕ್ಕಿನಲ್ಲೊ ಮತ್ತೆಲ್ಲೋ ಒಂದು ಸಲ ಭೇಟಿಯಾದ, ಮೆಸೇಜ್ ಮಾಡಿಕೊಂಡ, ಕರೆವಮಾಡಿದ ವ್ಯಕ್ತಿ ಮತ್ತಿನ್ನ್ಯಾವಾಗಲೋ ಸಿಕ್ಕಿದರೆ ಥಟ್ಟನೆ ಗುರುತು ಹತ್ತುತ್ತದಾ ? ಹೌದು ಇವೆಲ್ಲಾ ಮೊದಲಿನಂತೆಯೇ ನನಗೆ ಸಲೀಸಾಗಿ ಒದಗುತ್ತಿದೆ ಎಂದರೆ  ಅವನು ಯಾವ ತಂತ್ರಜ್ಞಾನಕ್ಕೂ ಗುಲಾಮನಾಗಿಲ್ಲ ಎಂದರ್ಥ. ಹಾಗೂ ಅವನು ಈ ಜಗತ್ತಿನ ಆರೋಗ್ಯವಂತ ವ್ಯಕ್ತಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಮೊಬೈಲ್, ಸ್ಮಾರ್ಟ್ ಫೋನ್ ಇರದೇ ಇದ್ದ ಕಾಲದಲ್ಲಿ ನಮ್ಮ ತಲೆಯೊಳಗೆ ಅದೆಷ್ಟೊಂದು ದೂರವಾಣಿ ಸಂಖ್ಯೆಗಳು ಹುದುಗಿ ಕುಳಿತಿದ್ದವು.! ಎಸ್ಟಿಡಿ ಬೂತ್ ಅಥವಾ ಮನೆಯ ಸ್ಥಿರ ದೂರವಾಣಿಯೆದುರು ಕುಳಿತರೆ ಹತ್ತಾರು ಜನರಿಗೆ ಯಾವುದೇ ಡೈರಿ ತಡಕಾಡದೇ ನಂಬರುಗಳನ್ನು ನೆನಪಿಸಿಕೊಂಡು ಕರೆ ಮಾಡುತ್ತಿದ್ದೆವು. ಆದರೆ ಇವತ್ತು ಅತ್ಯಂತ ಅಗತ್ಯ ಸಂಖ್ಯೆಗಳೂ ನೆನಪಾಗುವುದಿಲ್ಲ. ಪ್ರತಿಯೊಂದಕ್ಕೂ ಫೋನ್ ತಡಕಾಡುತ್ತೇವೆ.  ಇದು ನಮಗಂಟಿರುವ ದೊಡ್ಡ ಸಮಸ್ಯೆಯೆಂದು ನಮಗರಿವಾಗುವುದು ಒಂದೋ ಫೋನ್ ಬ್ಯಾಟರಿ ಸತ್ತುಹೋದಾಗ ಇಲ್ಲವೇ ಫೋನ್ ಕಳೆದುಹೋದಾಗ.! ಇನ್ನು ಮೊದಲಿನಂತೆ ಒಂದು ಬಾರಿ ಹೋಗಿದ್ದ ವಿಳಾಸಕ್ಕೆ ಮತ್ತೆ ಹಲವು ತಿಂಗಳ ...

ಹುಲಿ ಬಂತು ಹುಲಿ

ನನ್ನೂರಿನ ಸರಹದ್ದಿನ ತೋಟವೊಂದಕ್ಕೆ ಹುಲಿ ಬಂದ ಬಗ್ಗೆ ಸುದ್ದಿಯೊಂದು ನಿನ್ನೆ ನಮ್ಮ ವಾಟ್ಸಾಪ್ ಗ್ರೂಪ್'ಗೆ ಬಂದಿತ್ತು. ಕಾಕತಾಳೀಯವೆಂಬಂತೆ ನಾನು ಅದೇ ಹೊತ್ತಿನಲ್ಲಿ ಮಲೆಗಳಲ್ಲಿ ಮದುಮಗಳು ಮಹಾ ಕಾವ್ಯದಲ್ಲಿನ ನಾಯಿಗುತ್ತಿ ದಾರಿಯಲ್ಲೆದುರಾದ ಹುಲಿಯನ್ನು ಓಡಿಸುವ ಪ್ರಸಂಗವನ್ನು ಓದುತ್ತಿದ್ದೆ! ಹುಲಿಯನ್ನು ಬೆದರಿಸಿ ಓಡಿಸಿದ ನಂತರ ಗುತ್ತಿ ಮಾಮೂಲಿಯಾಗಿ ಹೆಜ್ಜೆ ಹಾಕುತ್ತಾನೆ.  ಹುಲಿಯೂ ಕೂಡಾ ಪರಿಸರದ ಉಳಿದೆಲ್ಲಾ ಪ್ರಾಣಿಗಳಂತೆ ಒಂದು ಪ್ರಾಣಿ ಅಷ್ಟೇ ಎಂಬಂತೆ. ಅವತ್ತಿನ ಕಾಲಕ್ಕೆ ಅದು ನಿಜ ಕೂಡಾ.... ಒಂಚೂರು ಹೆಚ್ಚಿನ ಕಿರಿಕಿರಿಯ ಪ್ರಾಣಿ ಅಷ್ಟೇ.!   ಮನೆಯ ಪಕ್ಕದ ಹಟ್ಟಿಗೇ ಬಂದು ದನ ಮುರಿಯುತ್ತಿದ್ದ ಹುಲಿಯ ಕತೆಯನ್ನು ದಳಿಮನೆಯ ದೊಡ್ಡ ಕುರ್ಚಿಯಲ್ಲಿ ಕುಳಿತು ಅಜ್ಜಿ ತಣ್ಣಗೆ ಹೇಳುವಾಗ ಕೇಳುತ್ತಿದ್ದ ನಮಗೆ ಕೂದಲೆಲ್ಲಾ ನೆಟ್ಟಗಾಗುವಂಥಾ ರೋಮಾಂಚನ. ಕತೆ ಮುಂದುವರಿದಂತೆ ಗಳಿಗೆಗೊಮ್ಮೆ ದಳಿಯಾಚೆಯ ಕತ್ತಲಿನೊಳಕ್ಕೆ ಒಮ್ಮೆ ದೀರ್ಘವಾಗಿ ಹೊಕ್ಕು ಹುಡುಕುತ್ತಿದ್ದೆವು. ಹುಲಿ ಹೊರಗೆಲ್ಲಾದರೂ ಅವಿತು ಕುಳಿತು ಅಜ್ಜಿಯ ಕಥೆಗೆ ಕಿವಿಗಿವಿ ಕೊಡುತ್ತಿದೆಯೇನೋ ಎಂಬ ಅವ್ಯಕ್ತ ಅನುಮಾನ ನಮಗೆ.! ಮಲೆನಾಡಿನ ಹಳೆಯ ಬಹುತೇಕ ಕತೆಗಳು ಹುಲಿಯೊಂದಿಗೇ ಮಿಳಿತವಾಗಿರುತ್ತಿತ್ತು. ಆದರೆ ಎಂದಿಗೂ ಹುಲಿ ಬಂತೆಂದು ಊರು ಬಿಟ್ಟ, ತೋಟ ಗದ್ದೆಗೆ ಹೋಗುವುದನ್ನು ಬಿಟ್ಟ ಉದಾಹರಣೆಗಳು ಇಲ್ಲವೇ ಇಲ್ಲ. ಹೆಚ್ಚೆಂದರೆ ಹುಲಿ ಕಾಟ ಮಿತಿಮೀರಿದರೆ ಕೋವಿ...

ತೇಜಸ್ವಿ ಸಿಕ್ಕಿದ್ರು

ಪಿಯುಸಿಗೆ ಹೋಗುತ್ತಿದ್ದಾಗ ಪ್ರತಿದಿನ ಬಸ್ಸು ಇಳಿದ ತಕ್ಷಣ ನಮಗೊಂದಿಬ್ಬರಿಗೆ ಎರಡು ಅಭ್ಯಾಸಗಳಿದ್ದವು. ಮೊದಲನೆಯದ್ದು ಬಸ್ ಇಳಿದ ತಕ್ಷಣ ನೇರವಾಗಿ  ಬಸ್ ನಿಲ್ದಾಣದ ಎದುರಿಗಿರುವ ಪೋಸ್ಟ್ ಆಫೀಸಿಗೆ ಹೋಗಿ ಊರಿನಲ್ಲಿ ಅವರಿವರು ಕೊಟ್ಟ ಫೋನ್ ಬಿಲ್ಲುಗಳನ್ನು ಕಟ್ಟುವುದು, ಯಾವುದಾದರೂ ಪೋಸ್ಟ್ ಕವರ್ ಗಳಿದ್ದರೆ ಆಳೆತ್ತರದ ಡಬ್ಬಿಯೊಳಗೆ ಹಾಕಿ ಆ ಡಬ್ಬಿಯ ಬಾಯಿಯೊಳಕ್ಕೆ ಕೈ ತೂರಿಸಿ ಯಾವುದಾದರೂ ಕವರ್ ಗಳು ಸಿಗಬಹುದೇನೋ ಎಂದು ತಡಕಾಡುವ ಕಿತಾಪತಿ. ಅದು ಮುಗಿದಮೇಲೆ ಸೀದಾ ಸಾರ್ವಜನಿಕ ಲೈಬ್ರರಿಗೆ ಹೋಗಿ ಎತ್ತರದ ಮೇಜಿನ ಮೇಲೆ ಸಾಲಾಗಿ ಜೋಡಿಸಿಟ್ಟ ಕನ್ನಡ ಪತ್ರಿಕೆಗಳನ್ನು ಓದಲು ಮೊದಲೇ ಬಂದು ಓದುತ್ತಿದ್ದ ಹುಡುಗರನ್ನು ಬದಿಗೆ ತಳ್ಳುತ್ತಾ ಸಂಧಿಯಲ್ಲಿ ತಲೆ ತೂರಿಸುತ್ತಾ ಓದಲು ಪ್ರಯತ್ನಿಸುವುದು. ಅಲ್ಲಿ ಜಾಗ ಸಿಗದಿದ್ದರೆ ಬಲಬದಿಯಲ್ಲಿ ಜೋಡಿಸಿಟ್ಟಿರುತ್ತಿದ್ದ  ಖಾಲಿ ಹೊಡೆಯುತ್ತಿದ್ದ ಇಂಗ್ಲೀಷ್ ಪೇಪರಿನ ಸಾಲಿನ ಮೇಜಿನ ಮೇಲೆ ತಲೆಯಿಟ್ಟು ಪತ್ರಿಕೆ ತಿರುವಿ ಹಾಕುತ್ತಾ ಚಿತ್ರಗಳನ್ನು ನೋಡುವುದು. ಹೀಗೆ ಪೋಸ್ಟ್ ಆಫೀಸಿಗೆ ಹೋಗುವಾಗಲೆಲ್ಲಾ( ವಾರದಲ್ಲಿ ಎರಡು ಮೂರು ಸಲ) ಬಿಳೀ ಗಡ್ಡದಾರಿ ವ್ಯಕ್ತಿಯೊಬ್ಬರು ದೊಡ್ಡ ಕನ್ನಡಕ ಹಾಕಿಕೊಂಡು ಪೋಸ್ಟ್ ಆಫೀಸಿನ ಒಳಕ್ಕೊ ಅಥವಾ ಅಲ್ಲಿಂದ ಹೊರಕ್ಕೋ ಹೋಗುತ್ತಿದ್ದರು. ಕೆಲವೊಮ್ಮೆ ನಾವು ಗೇಟಿನೊಳಗೆ ಆಡಿಯಿಡುವಾಗ ಆ ವ್ಯಕ್ತಿ ಮೆಟ್ಟಿಲಿಳಿದು ಸಿಂಗಲ್ ಸೀಟಿನ ಸ್ಕೂಟರ್ ಹತ್ತಿ ಹೋಗುತ್ತಿದ್ದರು. ...

Nature Engineering

ಈ ಮಳೆಗಾಲದಲ್ಲಿ ನಮ್ಮೂರಿನ ಗುಡ್ಡ ಕುಸಿದ ಜಾಗಗಳಲ್ಲಿ ಓಡಾಡುವಾಗ ಒಂದು ಕಡೆ ದೊಡ್ಡ ವಿಸ್ಮಯ ಎನಿಸುವಂಥದ್ದು ಕಂಡಿತು. ಕಾಫಿ ತೋಟದ ಪುಟ್ಟ ಕಣಿವೆಯೊಂದು ಗುಡ್ಡದ ಮಣ್ಣು , ನೀರು ಕೊಚ್ಚಿ ಬಂದ ಪರಿಣಾಮ ಐವತ್ತರವತ್ತು ಅಡಿ ಅಗಲದಷ್ಟು ದೊಡ್ಡ ಹೊಳೆಯಾಗಿ ಮಾರ್ಪಟ್ಟಿತ್ತು.! ಮಣ್ಣಿನಡಿಯಿಂದ ದೊಡ್ಡ ಗಾತ್ರದ ಕಲ್ಲುಗಳು ಉದ್ಭವವಾಗಿದ್ದವು. ಅದೊಂದು ಹೊಸತಾಗಿ ಹುಟ್ಟಿಕೊಂಡ ಹೊಳೆ. ಅದನ್ನು ನೋಡಿದಾಗ ನನಗನ್ನಿಸಿದ್ದು ಅಲ್ಲಿದ್ದಿರಬಹುದಾದ ಹೊಳೆಯೊಂದು ಹಿಂದ್ಯಾವತ್ತೋ ನಿರಂತರವಾಗಿ ಮುಚ್ಚುತ್ತಾ ಹೋಗಿ ಕಡೆಗೆ ಮಾಯವೇ ಆದ ಪರಿಣಾಮ ಅಥವಾ ಹೊಳೆಯನ್ನೂ ಒತ್ತುವರಿ ಮಾಡಿ ತೋಟ ಮಾಡಿದ ಪರಿಣಾಮ ಆ ಮಣ್ಣಿನಡಿಯಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಹೊಳೆಯು ತನ್ನ ಸಮಯ ಬಂದಾಗ ಸ್ಪೋಟಿಸಿಕೊಂಡು ತನ್ನ ಜಾಗವನ್ನು ತೆರವು ಮಾಡಿಕೊಂಡಿತೇನೋ... ಇದೇ Nature engineering! ಪ್ರಕೃತಿ ತನ್ನನ್ನೇ ತಾನು ಶುದ್ದೀಕರಿಸಿಕೊಳ್ಳುವ ಪರಿ.! ಅಥವಾ ಸಮತೋಲನ ಮಾಡಿಕೊಳ್ಳುವ ರೀತಿ. ಬರ, ನೆರೆ, ಭೂಕಂಪ, ಕಾಡ್ಗಿಚ್ಚು ಎಲ್ಲವೂ ಪ್ರಕೃತಿಯ ಇಚ್ಛೆಗನುಸಾರವಾಗಿಯೇ ನಡೆಯುವಂಥದ್ದು. ತಾನು ಸಾಕುತ್ತಿರುವ ಸಕಲ ಜೀವರಾಶಿಗಳಲ್ಲಿ ಎಲ್ಲೋ ಸಮತೋಲನ ತಪ್ಪುತ್ತಿದೆ ಎಂದು ಅರಿವಾದ ತಕ್ಷಣ ಪ್ರಕೃತಿ ಮುಲಾಜಿಲ್ಲದೇ ಜರಡಿ ಹಿಡಿದು ಕೆಳಗೆ ಉದುರಿದ ಜೀವಿಗಳನ್ನು ಎತ್ತಿ ಹೊರಗೆಸೆಯುತ್ತದೆ. ಉದುರದೇ ಉಳಿದುಕೊಂಡವರು ಮುಂದಿನ filtration ಪ್ರಕಿಯೆ ನಡೆಯುವ ತನಕ ಸೇಫ್.! ಮುಂದಿನ ಕಾರ್ಯಾಚರ...

ಪ್ರೀತಿಯೆಂದರೆ....

ನಾನು ಪ್ರೀತಿಯ ಬಗ್ಗೆ ಏನಾದರೂ ಬರೆದರೆ ನನ್ನ ಬಗ್ಗೆ ಗೊತ್ತಿರುವ ಕೆಲವರು ಭಯಂಕರವಾಗಿ ನಕ್ಕುಬಿಡುತ್ತಾರೆ. ಕಾರಣ ನಾನದೆಷ್ಟು ಒರಟು ಮುಂಡೇದು ಎಂದು ಅವರಿಗೆ ಗೊತ್ತು. ನನ್ನ ಆತ್ಮಬಂಧುವೊಬ್ಬರು feeling less ಕತ್ತೆ ಎಂದೇ ಕರೆಯುತ್ತಾರೆ.  ನಾನೋ ಬಂಡ ನನ್ಮಗ ಅವರ ಬೈಗುಳವೆಲ್ಲಾ ನನಗೆ ತಾಗುವುದಿಲ್ಲ ಬಿಡಿ.😁 ಅದೆಲ್ಲಾ ಅತ್ಲಾಗಿರಲಿ...  ನೀವು ಗಮನಿಸಿ ನೋಡಿ ಅಥವಾ ಅನುಭವಿಸಿ ನೋಡಿ.( ಕೆಲವರು ಅನುಭವಿಸುತ್ತಲೂ ಇರಬಹುದು.!) ನಿಜವಾದ ಪ್ರೀತಿ ಹುಟ್ಟುವುದು ಕೇವಲ ಒಬ್ಬಳ/ನ ಮೇಲೆ ಮಾತ್ರ. ಮತ್ತು ಆಳವಾಗಿ ಪ್ರೀತಿಸಲು ಸಾಧ್ಯವಾಗುವುದು ಕೇವಲ‌ ಒಂದು ಜೀವವನ್ನು ಮಾತ್ರ. ಒಂದೇಸಲಕ್ಕೆ ಇಬ್ಬರನ್ನು ಪ್ರೀತಿಸುತ್ತೇನೆ, ಮೂರು ಮತ್ತೊಬ್ಬರನ್ನು ಪ್ರೀತಿಸುತ್ತೇನೆ ಅಂದುಕೊಳ್ಳುವುದು ಮುಠಾಳತನ ಅಥವಾ ಆತ್ಮವಂಚನೆ. ಎರಡನೆಯವರನ್ನು ನೀವು ಮೋಹಿಸಬಹುದಷ್ಟೇ ಅಥವಾ ಕಾಮಿಸಬಹುದಷ್ಟೇ ಅದನ್ನೇ ಪ್ರೀತಿಯೆಂದು ಭ್ರಮಿಸಬಹುದಷ್ಟೇ. ಅದರಾಚೆಗೆ ನೀವು ಉಸ್ಸಪ್ಪಾ ಇವಳೇ/ನೇ ನನ್ನ ಜೀವ ಎಂದು ಪ್ರೀತಿಸಲು ಸಾಧ್ಯವೇ ಇಲ್ಲ. ಹಾಗೆ ಪ್ರೀತಿಸುತ್ತೇನೆ ಎಂದು ಚಾಲೆಂಜುಗೀಲೆಂಜು ಹಾಕಿದಿರೆಂದರೆ ನೀವು ಮೊದಲಿನ ಪ್ರೀತಿಗೆ ದ್ರೋಹವೆಸಗುತ್ತಿದ್ದೀರೆಂದಷ್ಟೇ ಅರ್ಥ.  ದೇಹ ಹತ್ತಾರು ಜನರ ಭಾವನೆಗಳಿಗೆ, ಕ್ರಿಯೆಗಳಿಗೆ, ಆಮಿಷಕ್ಕೆ, ಆಸೆಗೆ, ಅವತಾರಕ್ಕೆ ಬಹುಬೇಗನೆ ಸ್ಪಂದಿಸಿಬಿಡುತ್ತದೆ. ಆದರೆ ಮನಸ್ಸು ಹಾಗಲ್ಲ, ಅದು ಒಬ್ಬರಿಗೆ ಮಾತ್ರ ಸ್ಪಂದಿಸುತ್ತದೆ ಮತ್ತು ...

ಇದು ರಣಹದ್ದಿನ ವ್ಯಥೆ...

ಊರಿನಲ್ಲಿದ್ದಾಗ ಮನೆಯೆದುರು ವಿಶಾಲವಾದ ಗೋಮಾಳವಿತ್ತು. ಹಗಲೂ ರಾತ್ರಿ ಜಾನುವಾರುಗಳ ಹಿಂಡು ಮೇಯುತ್ತಿರುತ್ತಿದ್ದವು. ಒಮ್ಮೆ ದನಗಳಿಗೆ ಅದೇನೋ ಖಾಯಿಲೆ ವಕ್ಕರಿಸಿಕೊಂಡಿತು( ಬಹುಶಃ ಕಾಲುಬಾಯಿ ರೋಗವಿರಬೇಕು) ಪ್ರತೀ ಮನೆಯಲ್ಲೂ ದನಗಳು ಒಂದರ ಹಿಂದೊಂದರಂತೆ ಸಾಯತೊಡಗಿದವು. ಸತ್ತ ದನಗಳನ್ನು ಹುಗಿಯುವವಷ್ಟು ವ್ಯವಧಾನವಿಲ್ಲದ ಜನ ಅವುಗಳನ್ನು ಹೊತ್ತು ತಂದು ಗೋಮಾಳದ ಮೂಲೆಯಲ್ಲಿದ್ದ ಸ್ಮಶಾನದಲ್ಲಿ ದೊಡ್ಡ ಮರವೊಂದರ ಕೆಳಗೆ ಎಸೆಯತೊಡಗಿದರು. ಒಂದಾ...! ಎರಡಾ...! ಹತ್ತಾರು ದನಗಳ ಕಳೇಬರಗಳು ಕೊಳೆತು ನಾರತೊಡಗಿದವು. ಆ ದಾರಿಯಲ್ಲಿ ಓಡಾಡುವುದೇ ದುಸ್ತರವಾಯಿತು. ಒಂದು ಬೆಳಿಗ್ಗೆ ಆ ಮಾರ್ಗವಾಗಿ ಹೋಗುತ್ತಿದ್ದ ಕೆಲವರು ಗುಂಪುಗೂಡಿ ದನಗಳನ್ನು ಎಸೆದಿದ್ದ ಕಡೆಗೆ ಕುತೂಹಲದಿಂದ ನೋಡತೊಡಗಿದರು. ಗುಂಪಿನೊಳಗೆ ನಾವೂ ಸೇರಿಕೊಂಡೆವು. ಕಳೇಬರಗಳ ಸುತ್ತ ನಾವು ಅಲ್ಲಿಯವರೆಗೂ ನೋಡಿಯೇ ಇರದ ದೊಡ್ಡ ದೊಡ್ಡ ಪಕ್ಷಿಗಳು ಸುತ್ತುವರಿದು ಕೊಳೆತ ಮಾಂಸವನ್ನು ತಮ್ಮ ದೊಡ್ಡ ಗಾತ್ರದ ಕೊಕ್ಕಿನಿಂದ ಕುಕ್ಕಿ ತಿನ್ನತೊಡಗಿದ್ದವು. ಗುಂಪಿನಲ್ಲಿದ್ದ ಯಾರೋ ಅಗ್ಗಗ್ಗಾ... ಎಂದು ಬಾಯಿ ಮಾಡಿದರು. ಒಮ್ಮೆಲೇ ಹತ್ತಾರು ಪಕ್ಷಿಗಳು ಛತ್ರಿಯಂತಹ ರೆಕ್ಕೆಗಳನ್ನು ಹರಡಿಕೊಂಡು ನಭಕ್ಕೆ ನೆಗೆದವು. ಅಬ್ಬಾ!! ಅದೆಂಥಾ ರೆಕ್ಕೆಗಳು.!! ಆ ಕಾಲಕ್ಕೆ ಅಷ್ಟು ದೊಡ್ಡ ಪಕ್ಷಿಯನ್ನೇ ಕಂಡಿರದ ನಮಗೆ ಇವೇನು ಹಕ್ಕಿಗಳೋ!? ಹಕ್ಕಿಗಳ ರೂಪದ ರಾಕ್ಷಸರೋ...!? ಎನಿಸಿಬಿಟ್ಟಿತು. ಅಂಥಾ ಗಾತ್ರ.! ಅವತ್ತಿಗೆ...

ಮೂಲಿಕೆಯೆಂಬ ಮಂತ್ರದಂಡ

ಭಾರತ ನಾಟಿ ವೈದ್ಯಕ್ಕೆ ಜಗತ್ತಿಗೇ ಪ್ರಸಿದ್ದಿ. ನಮ್ಮ ಪೂರ್ವಿಕರು ಹಲವಾರು ಚಿಕ್ಕ, ದೊಡ್ಡ ಖಾಯಿಲೆಗಳಿಗೆ ತಮ್ಮ ಪರಿಸರದಲ್ಲೇ ಔಷಧಿಗಳನ್ನು ಕಂಡುಕೊಂಡಿದ್ದರು. ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ, ದುಬಾರಿ ಖರ್ಚು ಮಾಡಿದರೂ ಗುಣವಾಗದ ಕೆಲವು ಖಾಯಿಲೆಗಳು ನಾಟೀ ಪದ್ದತಿಯಲ್ಲಿ ಖರ್ಚೇ ಇಲ್ಲದೇ ಗಿಡಮೂಲಿಕೆಗಳಿಂದ ಗುಣವಾಗಿಬಿಡುತ್ತವೆ.! ವೈದ್ಯಲೋಕಕ್ಕೇ ಸವಾಲಾಗುವ ಕೆಲವು ಖಾಯಿಲೆಗಳು ಗಿಡಮೂಲಿಕೆಗಳೆದುರು ಬಾಲ ಮುದುರಿಕೊಂಡು ಓಡಿ ಹೋಗಿಬಿಡುತ್ತವೆ. ಇದೇ ನಮ್ಮ ಆಯುರ್ವೇದದ, ನಾಟೀ ವೈದ್ಯ ಪದ್ದತಿಯ ಶಕ್ತಿ. ನಾನು ಕಣ್ಣಾರೆ ಕಂಡ ಅಂತಹ ನಾಟಿ ವೈದ್ಯರೊಬ್ಬರ ಪರಿಚಯವನ್ನು ನಿಮಗೆ ನೀಡುತ್ತೇನೆ. ಅಗತ್ಯವಿರುವವರು ಬಳಸಿಕೊಳ್ಳಬಹುದು, ಮತ್ತೊಂದಷ್ಟು ಜನರೊಂದಿಗೆ ಮಾಹಿತಿಯನ್ನು  ಹಂಚಿಕೊಳ್ಳಬಹುದು. ಕೆಲವು ವರ್ಷಗಳ ಕೆಳಗೆ ನಮ್ಮ ಹುಡುಗ ನವೀನನಿಗೆ ಜಾಂಡೀಸ್ ಆಗಿತ್ತು. ಆಸ್ಪತ್ರೆಯ ಔಷಧಿಗಳು ಕಾಯಿಲೆಯನ್ನು ವಾಸಿಮಾಡದೇ ಉಲ್ಬಣಗೊಂಡಾಗ ಯಾರೋ ಈ ಮೊದಲೇ ಔಷಧಿ ತೆಗೆದುಕೊಂಡು ಸಂಪೂರ್ಣ ಗುಣ ಹೊಂದಿದ್ದವರೊಬ್ಬರು ಕೊಟ್ಟ ವಿಳಾಸ ಹಿಡಿದು ನಾಟಿ ವೈದ್ಯ ರವಿ ಹೆಗ್ಗಡೆಯವರ ಮನೆ ಹುಡುಕುತ್ತಾ ಹೊರಟೆವು. ಉಡುಪಿಯ ಭ್ರಹ್ಮಾವರದಿಂದ ಇಪ್ಪತ್ತೈದು-ಮೂವತ್ತು ಕಿಲೋಮೀಟರು ದೂರದ ಊರದು. ಶ್ರೀ ಕ್ಷೇತ್ರ ಮಂದಾರ್ತಿಯನ್ನು ದಾಟಿ ಹೋಗಬೇಕು. ಹಿಲಿಯಾಣ ಅನ್ನೋ ಊರಿನ ಗೋಳಿಯಂಗಡಿ ಎಂಬಲ್ಲಿಗೆ ಹೋಗಬೇಕಿತ್ತು. ಹಿಲಿಯಾಣದಲ್ಲಿಳಿದು ಆಟೊದಲ್ಲಿ ಆ ಮನೆಯ ಹತ್ತಿರ ಹೋಗಿಳ...

ದೇವರೆಂದರೆ ನಂಬಿಕೆ... ನಂಬಿಕೆಯೇ ದೇವರು.

ಮಲೆನಾಡಿನಲ್ಲಿ ಇತ್ತೀಚಿನ ತನಕವೂ ನಂಬಿಕೆಯೊಂದಿತ್ತು  (ಈಗಲೂ ಇರಬಹುದು). ಕಾಕತಾಳೀಯವೋ, ಪ್ರಕೃತಿಯ  ನಿಗೂಢತೆಯೋ ಅಂಗಳದಲ್ಲಿ  ಆಡುತ್ತಿರುತ್ತಿದ್ದ ಪುಟ್ಟ ಕರುಗಳು ಕೆಲಹೊತ್ತು ಕಾಣೆಯಾಗುತ್ತಿದ್ದವು. ಸುತ್ತ-ಮುತ್ತಲಿನೆಲ್ಲಿ ಹುಡುಕಿದರೂ ಕರುವಿನ ಸುಳಿವು ಸಿಗುತ್ತಿರಲಿಲ್ಲ. ಆ ಕ್ಷಣಕ್ಕೆ ಅಮ್ಮನೋ, ಅಜ್ಜಿಯೋ ' ಕರಿಗೆ ಏನೂ ಆಗ್ದಂಗೆ ವಾಪಸ್ ಬಂದ್ರೆ ನಿಂಗೊಂದ್ ಹಣ್ಕಾಯಿ ಕೊಡ್ತಿನಿ, ಕೋಳಿ ಕೊಡ್ತಿನಿ' ಎಂದು ದೈವಕ್ಕೆ ಕಾಣಿಕೆ ಕಟ್ಟುತ್ತಿದ್ದರು. ಕಾಣಿಕೆ ಕಟ್ಟಿದ ಕೆಲಹೊತ್ತಿನಲ್ಲೇ ಕರು ಅದೆಲ್ಲಿಂದಲೋ ಚೆಂಗನೆ ನೆಗೆದು ಬರುತ್ತಿತ್ತು.! 'ಕರನ ದಯ್ಯ ಅಡಗ್ಸಿಡ್ತದೆ' ಎಂಬುದು ಮಲೆನಾಡಿನಲ್ಲಿ ಬಹು ಪ್ರಚಲಿತದ ಮಾತು. ನಾನಿಲ್ಲಿ ಕರುವನ್ನು ದೈವವೇ ಹುಡುಕಿಕೊಟ್ಟಿತು ಅಂತಲೋ ಅಥವಾ ಇವೆಲ್ಲಾ ಜನರ ಮೂಢ ನಂಬಿಕೆಯಷ್ಟೇ ಅಂತಲೋ ತರ್ಕಿಸುತ್ತಿಲ್ಲ ಅಥವಾ ಷರಾ ಬರೆಯುತ್ತಿಲ್ಲ. ಜನಪದವನ್ನು, ಜನರ ನಂಬಿಕೆಗಳನ್ನು ನಾನು ಎಲ್ಲದಕ್ಕಿಂತಾ ಹೆಚ್ಚು ಪ್ರೀತಿಸುತ್ತೇನೆ, ಗೌರವಿಸುತ್ತೇನೆ.  ಚೌಡಿ, ದಯ್ಯ, ಜಟ್ಟಿಗ, ಹೊಟ್ಟು ದಯ್ಯ ಇವೆಲ್ಲಾ ಮಲೆನಾಡಿನಲ್ಲಿ ಸದಾ ಕಾಲ ತೋಟ, ಗದ್ದೆ ಕಾಯುವ, ಜಾನುವಾರುಗಳನ್ನು ರಕ್ಷಿಸುವ ದೈವಗಳು. ಅವುಗಳಿಗೆ ವರ್ಷಕ್ಕೊಮ್ಮೆ  ಎರಡು, ನಾಲ್ಕು ಕಾಲಿನ ಆಹಾರ ನೀಡಲೇಬೇಕು. ಅದರಲ್ಲೂ ಬಹುತೇಕ ದೈವಗಳಿಗೆ ಹಂದಿಯೇ ಪ್ರಿಯವಾದ ಆಹಾರ. ' ಇವತ್ತು ಚೌಡಿಗೆ ಇಕ್ತಾರಂತೆ...' ಎಂಬ ಸುದ್ದಿ ಕಿವಿಗೆ ಬಿದ್ದ...

ಮಾಯಾಲೋಕದ ಕಥೆ

ಮಾಯಾಲೋಕ ! ಅಕ್ಷರ ಸಾಮ್ರಾಟ ಪೂರ್ಣಚಂದ್ರ ತೇಜಸ್ವಿಯವರು ನನ್ನೂರಿಗೆ ( ಅವರೂರಿಗೆ) ಇಟ್ಟ ಮತ್ತೊಂದು ಹೆಸರು. ಎಂಥಾ ಚೆಂದದ ಹೆಸರು! ಎಂಥಾ ಅದ್ಭುತ ಹೆಸರು!! ಎಂದಿಗೂ ಬ್ಲಾಗ್ ಕಡೆ ತಲೆಯಿಡದಿದ್ದ ನಾನು ಗೆಳೆಯನೊಬ್ಬನ ಒತ್ತಾಯದಿಂದ ಬ್ಲಾಗ್ ಅಕೌಂಟ್ ತೆರೆದಿದ್ದೇನೆ. ಅದಕ್ಕೆ ಮಾಯಾಲೋಕ ಎಂಬ ಹೆಸರಿಟ್ಟಿದ್ದೇನೆ ನನ್ನ ಮಾಯಾಲೋಕವೂ ನನ್ನ ಮಾನಸ ಗುರುವಿನ ಮಾಯಾಲೋಕದಂತೆಯೇ ಓದುಗರನ್ನು ಕಾಡಬಹುದೆಂಬ ವಿಶ್ವಾಸದೊಂದಿಗೆ... ತೋಚಿದ್ದನ್ನು ಗೀಚುತ್ತಿರುತ್ತೇನೆ ನೀವು ಒಪ್ಪಿಸಿಕೊಳ್ಳಬೇಕು...