ಊರಿನಲ್ಲಿದ್ದಾಗ ಮನೆಯೆದುರು ವಿಶಾಲವಾದ ಗೋಮಾಳವಿತ್ತು. ಹಗಲೂ ರಾತ್ರಿ ಜಾನುವಾರುಗಳ ಹಿಂಡು ಮೇಯುತ್ತಿರುತ್ತಿದ್ದವು. ಒಮ್ಮೆ ದನಗಳಿಗೆ ಅದೇನೋ ಖಾಯಿಲೆ ವಕ್ಕರಿಸಿಕೊಂಡಿತು( ಬಹುಶಃ ಕಾಲುಬಾಯಿ ರೋಗವಿರಬೇಕು) ಪ್ರತೀ ಮನೆಯಲ್ಲೂ ದನಗಳು ಒಂದರ ಹಿಂದೊಂದರಂತೆ ಸಾಯತೊಡಗಿದವು. ಸತ್ತ ದನಗಳನ್ನು ಹುಗಿಯುವವಷ್ಟು ವ್ಯವಧಾನವಿಲ್ಲದ ಜನ ಅವುಗಳನ್ನು ಹೊತ್ತು ತಂದು ಗೋಮಾಳದ ಮೂಲೆಯಲ್ಲಿದ್ದ ಸ್ಮಶಾನದಲ್ಲಿ ದೊಡ್ಡ ಮರವೊಂದರ ಕೆಳಗೆ ಎಸೆಯತೊಡಗಿದರು. ಒಂದಾ...! ಎರಡಾ...! ಹತ್ತಾರು ದನಗಳ ಕಳೇಬರಗಳು ಕೊಳೆತು ನಾರತೊಡಗಿದವು. ಆ ದಾರಿಯಲ್ಲಿ ಓಡಾಡುವುದೇ ದುಸ್ತರವಾಯಿತು. ಒಂದು ಬೆಳಿಗ್ಗೆ ಆ ಮಾರ್ಗವಾಗಿ ಹೋಗುತ್ತಿದ್ದ ಕೆಲವರು ಗುಂಪುಗೂಡಿ ದನಗಳನ್ನು ಎಸೆದಿದ್ದ ಕಡೆಗೆ ಕುತೂಹಲದಿಂದ ನೋಡತೊಡಗಿದರು. ಗುಂಪಿನೊಳಗೆ ನಾವೂ ಸೇರಿಕೊಂಡೆವು. ಕಳೇಬರಗಳ ಸುತ್ತ ನಾವು ಅಲ್ಲಿಯವರೆಗೂ ನೋಡಿಯೇ ಇರದ ದೊಡ್ಡ ದೊಡ್ಡ ಪಕ್ಷಿಗಳು ಸುತ್ತುವರಿದು ಕೊಳೆತ ಮಾಂಸವನ್ನು ತಮ್ಮ ದೊಡ್ಡ ಗಾತ್ರದ ಕೊಕ್ಕಿನಿಂದ ಕುಕ್ಕಿ ತಿನ್ನತೊಡಗಿದ್ದವು. ಗುಂಪಿನಲ್ಲಿದ್ದ ಯಾರೋ ಅಗ್ಗಗ್ಗಾ... ಎಂದು ಬಾಯಿ ಮಾಡಿದರು. ಒಮ್ಮೆಲೇ ಹತ್ತಾರು ಪಕ್ಷಿಗಳು ಛತ್ರಿಯಂತಹ ರೆಕ್ಕೆಗಳನ್ನು ಹರಡಿಕೊಂಡು ನಭಕ್ಕೆ ನೆಗೆದವು. ಅಬ್ಬಾ!! ಅದೆಂಥಾ ರೆಕ್ಕೆಗಳು.!! ಆ ಕಾಲಕ್ಕೆ ಅಷ್ಟು ದೊಡ್ಡ ಪಕ್ಷಿಯನ್ನೇ ಕಂಡಿರದ ನಮಗೆ ಇವೇನು ಹಕ್ಕಿಗಳೋ!? ಹಕ್ಕಿಗಳ ರೂಪದ ರಾಕ್ಷಸರೋ...!? ಎನಿಸಿಬಿಟ್ಟಿತು. ಅಂಥಾ ಗಾತ್ರ.! ಅವತ್ತಿಗೆ ಚಿಕ್ಕ ಹುಡುಗರಾದ ನಮಗೆ ತಿಳಿದದ್ದು ಇವೇ ರಣಹದ್ದುಗಳು ಎಂದು.
ಆ ನಂತರ ಒಂದು ವಾರ ಯುದ್ದಕ್ಕೆ ಬಂದ ಯೋಧರಂತೆ ನೂರಾರು ರಣಹದ್ದುಗಳು ಅಲ್ಲಿಯೇ ಗುಂಪುಗೂಡಿದವು. ಕೊಳೆತ ದನಗಳನ್ನೆಲ್ಲಾ ತಿಂದು ಇಡೀ ಪರಿಸರವನ್ನು ವಾಸನೆಯಿಂದ ಮುಕ್ತಗೊಳಿಸಿದವು. ಅಂದಹಾಗೆ ರಣಹದ್ದುಗಳು ಸುಂದರ ಪಕ್ಷಿಗಳಲ್ಲ. ಅವುಗಳ ದೇಹದ ಮೇಲ್ಮೈ ಒಂತರಾ ಕೊಳಕು ಹಿಡಿದಂತೆ ಕಾಣುತ್ತವೆ. ಕೊಳೆತ ಮಾಂಸವನ್ನೇ ತಿನ್ನುವುದರಿಂದ ಅವೂ ಸ್ವಚ್ಛವಾಗಿ ಕಾಣುವುದಿಲ್ಲವೇನೋ...
ಅಲ್ಲಿಂದ ಅವು ತೆರಳಿದ ನಂತರ ಹದ್ದುಗಳನ್ನು ನಾನು ಮತ್ತೆಲ್ಲೂ ಕಾಣಲಿಲ್ಲ.
ರಣಹದ್ದುಗಳು ವಲಸೆ ಪಕ್ಷಿಗಳು ಎನ್ನುತ್ತಾರೆ. ಇತ್ತೀಚೆಗೆ ಸತ್ತ ದನಗಳನ್ನು ಎಸೆಯುವುದು ಕಡಿಮೆಯಾದ್ದರಿಂದಲೋ, ಅಥವಾ ಅವುಗಳಿಗೆ ಆಹಾರದ ಕೊರತೆಯೋ ಇಲ್ಲಾ ಹವಾಮಾನ ವೈಪರೀತ್ಯದ ಹೊಡೆತ ಉಳಿದೆಲ್ಲಾ ಪಕ್ಷಿಗಳಂತೆ ಅವುಗಳನ್ನೂ ಬಾಧಿಸುತ್ತಿದೆಯೋ ಅಂತೂ ರಣಹದ್ದುಗಳು ಕಾಣುತ್ತಿಲ್ಲ. ಜೊತೆಗೆ
ಜಾನುವಾರುಗಳಲ್ಲಿ ನೋವು ನಿವಾರಕ ಔಷಧ ಡೈಕ್ಲೋಫಿನಾಕ್ ಬಳಕೆಯಲ್ಲಿತ್ತು. ಹಿಂದೆ ಯತೇಚ್ಚವಾಗಿ ಅದನ್ನು ಬಳಸುತ್ತಿದ್ದರು. ಇದರಿಂದ ಅನಾರೋಗ್ಯ ಪೀಡಿತವಾಗಿ, ಚಿಕಿತ್ಸೆಗೆ ಒಳಪಟ್ಟು ಸತ್ತ ಜಾನುವಾರುಗಳಲ್ಲಿ ಈ ಅಂಶ ಅದರ ಮಾಂಸಖಂಡಗಳಲ್ಲಿ ಇರುತ್ತಿತ್ತು. ಅವುಗಳು ಸತ್ತ ನಂತರ ಅವನ್ನು ತಿಂದ ರಣಹದ್ದುಗಳಲ್ಲಿ ಡೈಕ್ಲೋಫಿನಾಕ್ ವಿಷಕಾರಿಯಾಗಿ( nephrotoxic) ಪರಿಣಮಿಸಿ ಕಿಡ್ನಿ ವೈಪಲ್ಯಕ್ಕೆ ಒಳಗಾಗಿ ಮರಣ ಹೊಂದಿದವು ಎಂದು ಕೆಲವು ಸಂಶೋದನೆಗಳು ಧೃಡಪಡಿಸಿವೆ.(ಇದನ್ನು ಎಲ್ಲರೂ ಪೂರ್ಣ ಅರ್ಥೈಸಿಕೊಳ್ಳುವುದು ಕಷ್ಟ). ಇದು ತಿಳಿದ ನಂತರ diclofenac ಔಷದವನ್ನು ಪಶುಚಿಕಿತ್ಸೆಗೆ ನಿಷೇಧಿಸಲಾಯಿತು.ಆದರೆ ಕಾಲ ಮಿಂಚಿದಂತೆ ಕಂಡುಬರುತ್ತಿದೆ. ಅವುಗಳ ಸಂತತಿ ಬಹುತೇಕ ಅಳಿವಿನಂಚಿನಲ್ಲಿದೆ.

Comments
Post a Comment