ಮಲೆನಾಡಿನಲ್ಲಿ ಇತ್ತೀಚಿನ ತನಕವೂ ನಂಬಿಕೆಯೊಂದಿತ್ತು
(ಈಗಲೂ ಇರಬಹುದು). ಕಾಕತಾಳೀಯವೋ, ಪ್ರಕೃತಿಯ ನಿಗೂಢತೆಯೋ ಅಂಗಳದಲ್ಲಿ ಆಡುತ್ತಿರುತ್ತಿದ್ದ ಪುಟ್ಟ ಕರುಗಳು ಕೆಲಹೊತ್ತು ಕಾಣೆಯಾಗುತ್ತಿದ್ದವು. ಸುತ್ತ-ಮುತ್ತಲಿನೆಲ್ಲಿ ಹುಡುಕಿದರೂ ಕರುವಿನ ಸುಳಿವು ಸಿಗುತ್ತಿರಲಿಲ್ಲ. ಆ ಕ್ಷಣಕ್ಕೆ ಅಮ್ಮನೋ, ಅಜ್ಜಿಯೋ ' ಕರಿಗೆ ಏನೂ ಆಗ್ದಂಗೆ ವಾಪಸ್ ಬಂದ್ರೆ ನಿಂಗೊಂದ್ ಹಣ್ಕಾಯಿ ಕೊಡ್ತಿನಿ, ಕೋಳಿ ಕೊಡ್ತಿನಿ' ಎಂದು ದೈವಕ್ಕೆ ಕಾಣಿಕೆ ಕಟ್ಟುತ್ತಿದ್ದರು. ಕಾಣಿಕೆ ಕಟ್ಟಿದ ಕೆಲಹೊತ್ತಿನಲ್ಲೇ ಕರು ಅದೆಲ್ಲಿಂದಲೋ ಚೆಂಗನೆ ನೆಗೆದು ಬರುತ್ತಿತ್ತು.!
'ಕರನ ದಯ್ಯ ಅಡಗ್ಸಿಡ್ತದೆ' ಎಂಬುದು ಮಲೆನಾಡಿನಲ್ಲಿ ಬಹು ಪ್ರಚಲಿತದ ಮಾತು. ನಾನಿಲ್ಲಿ ಕರುವನ್ನು ದೈವವೇ ಹುಡುಕಿಕೊಟ್ಟಿತು ಅಂತಲೋ ಅಥವಾ ಇವೆಲ್ಲಾ ಜನರ ಮೂಢ ನಂಬಿಕೆಯಷ್ಟೇ ಅಂತಲೋ ತರ್ಕಿಸುತ್ತಿಲ್ಲ ಅಥವಾ ಷರಾ ಬರೆಯುತ್ತಿಲ್ಲ. ಜನಪದವನ್ನು, ಜನರ ನಂಬಿಕೆಗಳನ್ನು ನಾನು ಎಲ್ಲದಕ್ಕಿಂತಾ ಹೆಚ್ಚು ಪ್ರೀತಿಸುತ್ತೇನೆ, ಗೌರವಿಸುತ್ತೇನೆ.
ಚೌಡಿ, ದಯ್ಯ, ಜಟ್ಟಿಗ, ಹೊಟ್ಟು ದಯ್ಯ ಇವೆಲ್ಲಾ ಮಲೆನಾಡಿನಲ್ಲಿ ಸದಾ ಕಾಲ ತೋಟ, ಗದ್ದೆ ಕಾಯುವ, ಜಾನುವಾರುಗಳನ್ನು ರಕ್ಷಿಸುವ ದೈವಗಳು. ಅವುಗಳಿಗೆ ವರ್ಷಕ್ಕೊಮ್ಮೆ ಎರಡು, ನಾಲ್ಕು ಕಾಲಿನ ಆಹಾರ ನೀಡಲೇಬೇಕು. ಅದರಲ್ಲೂ ಬಹುತೇಕ ದೈವಗಳಿಗೆ ಹಂದಿಯೇ ಪ್ರಿಯವಾದ ಆಹಾರ. ' ಇವತ್ತು ಚೌಡಿಗೆ ಇಕ್ತಾರಂತೆ...' ಎಂಬ ಸುದ್ದಿ ಕಿವಿಗೆ ಬಿದ್ದರೆ ಆ ಊರಿನ, ಪರವೂರಿನ ಜನ ತಮ್ಮೆಲ್ಲಾ ಕೆಲಸಗಳನ್ನೂ ಬದಿಗಿಟ್ಟು ಊಟದ ಹೊತ್ತಿಗೆ ಸರಿಯಾಗಿ ದೈವದ ಬನದೊಳಗೆ ಜಮಾಯಿಸಿಬಿಡುತ್ತಾರೆ.
ತುಂಡಿನ( ಮಾಂಸಾಹಾರ) ಘಮಲಿನ ಆಕರ್ಷಣೆಯೇ ಅಂಥಾದ್ದು.!
ಒಂದೇ ಬನದಲ್ಲಿ ಮೂರ್ನಾಲ್ಕು ದೈವಗಳ ಪ್ರತಿಷ್ಟಾಪನೆಯಾಗಿರುತ್ತದೆ. ಒಂದೊಂದಕ್ಕೂ ಒಂದೊಂದು ಹೆಸರು. ಪ್ರತಿಯೊಂದು ದೈವಗಳಿಗೂ ಪ್ರತ್ಯೇಕವಾದ ಹಬ್ಬ, ಪ್ರತ್ಯೇಕವಾದ ಎಡೆ( ನೈವೇದ್ಯ) ರೈತರ ಫಸಲು ಕುಯಿಲು ಮುಗಿದ ನಂತರ ದೈವಗಳಿಗೆ ಸುಗ್ಗಿಯೋ ಸುಗ್ಗಿ.! ಬೇಸಿಗೆಯ ಎರಡು ತಿಂಗಳಿನಲ್ಲಿ ಹದಿನೈದಿಪ್ಪತ್ತು ದಿನಗಳ ಅಂತರದಲ್ಲಿ ಒಂದೊಂದು ದೈವಕ್ಕೆ ಊಟ.
ಪ್ರತಿ ವರ್ಷವೂ ಎಡೆಯಿಕ್ಕದಿದ್ದರೆ ದೈವಗಳು ತೋಟ ಕಾಯುವುದಿಲ್ಲ ಎಂಬ ನಂಬಿಕೆ. ಇನ್ನು ಕೆಲವು ದೈವಗಳು ನಿಗದಿತ ಸಮಯದಲ್ಲಿ ಊಟ ನೀಡದಿದ್ದಲ್ಲಿ ರಾತ್ರಿ ಹೊತ್ತು ಅಬ್ಬರಿಸುತ್ತಾ ತಿರುಗುತ್ತವೆ, ಮನೆಯ ಸುತ್ತಾ ಗೆಜ್ಜೆ ಸದ್ದು ಮಾಡುತ್ತಾ ಓಡಾಡುತ್ತವೆ ಎಂಬ ನಂಬಿಕೆ.
ಮೇಲಿನ ಯಾವುವೂ ಮೂಢ ನಂಬಿಕೆಗಳಲ್ಲ. ನಂಬಿಕೆಯಷ್ಟೇ... ಮತ್ತೊಬ್ಬರಿಗೆ ಅಥವಾ ತನಗೇ ತೊಂದರೆಯಾಗದಂತೆ , ನಷ್ಟವಾಗದಂತೆ ಆಚರಿಸುವ ಯಾವ ಆಚರಣೆಯೂ ಮೂಢ ನಂಬಿಕೆಯಲ್ಲ. ಮೇಲಾಗಿ ದೈವ ಎಂದರೆ ಪ್ರಕೃತಿಯ ಒಂದು ಭಾಗ. ದೈವಕ್ಕೆ ಆಕಾರವಿಲ್ಲ, ಮೂರ್ತಿ ರೂಪವಿಲ್ಲ. ಕಲ್ಲುಗಳನ್ನು ಮರದಡಿಯಲ್ಲಿಟ್ಟು ಊರಿಗೆ ಒಳ್ಳೆಯದಾಗಲಿ , ಕಾಲಕಾಲಕ್ಕೆ ಮಳೆ, ಬೆಳೆ ಚೆನ್ನಾಗಿ ಬರಲಿ ಎಂದು ಪೂಜಿಸುವ ರೀತಿಯೇ ಅನನ್ಯವಾದ್ದು. ಅದೇ ನಿಜವಾದ ಪ್ರಕೃತಿಯ ಆರಾಧನೆ.
ದೇವರೆಂದರೆ ನಂಬಿಕೆ, ನಂಬಿಕೆಯೇ ದೇವರು...
ಅದೂ ಕೂಡಾ ಪ್ರಕೃತಿಯನ್ನೇ ದೇವರೆಂದು ಪೂಜಿಸುವುದು ಜನಪದದ ಉತ್ಕೃಷ್ಟ ಮನಃಸ್ಥಿತಿಗೆ ಸಾಕ್ಷಿ.

ಅಬ್ಬಾ ಒಂದೇ ಉಸಿರಿನಲ್ಲಿ ಓದಿಸಿಕೊಂಡು ಹೋಯ್ತು... 😇🙏🙏
ReplyDelete😇😇😇
DeleteNice 😊
Delete