Skip to main content

Posts

Showing posts from March, 2021

ವಿಶ್ವ ಜಲದಿನ

ಈಗೊಂದು ಎಂಟ್ಹತ್ತು ವರ್ಷಗಳ ಹಿಂದಿನ ಆಚೆಯ ದಿನಗಳಲ್ಲಿ ಅದೆಂತಹುದೇ ಬಿಸಿಲಿದ್ದರೂ, ತಾಪಮಾನವಿದ್ದರೂ ನೀರಿಗೆ ಬವಣೆ ಪಡಬೇಕಿರಲಿಲ್ಲ. ಬೇಸಿಗೆಯಲ್ಲೂ ಸಹ ಹೊಳೆಯಲ್ಲಿ ಸಾಕಷ್ಟು ನೀರು ಹರಿಯುತ್ತಿತ್ತು, ಗದ್ದೆ ಬಯಲಿನ ನಡುವೆ, ಆಚೀಚಿನ ಬದಿಗಳಲ್ಲಿ ಹರಿದು ಹೊಳೆ ಸೇರುವ ಸಣ್ಣ ಹಳ್ಳ/ತೊರೆಗಳು ಸಣ್ಣದಾಗಿಯಾದರೂ ಹರಿದು ಹೊಳೆಯ ನೀರು ಬತ್ತದಂತೆ ನೋಡಿಕೊಳ್ಳುತ್ತಿದ್ದವು. ಹಾಗಿದ್ದರೆ ಈಗೇನಾಯ್ತು...?  ಮಲೆನಾಡಿನಲ್ಲಿ ಇವತ್ತು ನೀರಿನ ಹರಿವು ಕಡಿಮೆಯಾಗಲು ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದು ಈ ಮೊದಲಿನಂತೆ ಜೂನ್ ಮೊದಲವಾರದಿಂದಲೇ ಗಾಳಿ ಸಮೇತ ಹೊಡೆಯುವ ಮಳೆ ಇತ್ತೀಚೆಗೆ ಹದ ತಪ್ಪಿರುವ ಮಾನ್ಸೂನಿನ ಏರಿಳಿತದಿಂದಾಗಿ ಜುಲೈ ಮಧ್ಯದಲ್ಲಿ ಬರಲು ಪ್ರಾರಂಭಿಸಿದೆ. ಅಲ್ಲಿಗೆ ಅರ್ಧ ಮಳೆಗಾಲವೇ ಕಳೆದುಹೋಗಿರುತ್ತದೆ. ಇದರ ಪರಿಣಾಮವಾಗಿ ಜಲಮೂಲಗಳು recharge(ಮರುಪೂರಣ)ಆಗುತ್ತಿಲ್ಲ. ಬಲವಾದ ಗಾಳಿ ಸಮೇತ ಹೊಡೆಯುವ ಮಳೆ ಜಲದ ಕಣ್ಣುಗಳನ್ನು ತೆರೆಯುತ್ತದೆ ಎನ್ನುವ ಮಾತು ಮಲೆನಾಡಿನಲ್ಲಿದೆ. ಅದು ನಿಜವೂ ಕೂಡಾ... ಜುಲೈ ಕಳೆದ ನಂತರ ಅದೆಷ್ಟೇ ಮಳೆ ಸುರಿದರೂ ಘಟ್ಟದ ಬುಡದಲ್ಲಿರುವ ಜಲಪಾತಗಳಲ್ಲಿ ನೀರು ಧಾರಾಕಾರವಾಗಿ ಸುರಿದು ಹೋಗುತ್ತದೆಯೇ ಹೊರತು ಅಂತರ್ಜಲ ವೃದ್ದಿಯಾಗುವುದಿಲ್ಲ. ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಸುರಿದ ಮಳೆ ಹೊಳೆಯಲ್ಲಿ ಕೊಚ್ಚಿಹೋಗಿ ಅಣೆಕಟ್ಟೆಗಳನ್ನು ಸೇರಿತೇ ಹೊರತು ಅಂತರ್ಜಲ ಒಂದಿಂಚೂ ಹೆಚ್ಚಾಗಿರಲಾರದು ಬಹುಶಃ.  ಎರಡನೇ ಮುಖ್ಯ...

ಕೀಟ ಸಾಮ್ರಾಜ್ಯ ಹಾಗೂ ಆಧುನಿಕ ಕೃಷಿ

 ಮೊನ್ನೆ ಸಹಜ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯುತ್ತಿರುವ ಶ್ರೀಯುತ. ಚಂದ್ರಶೇಖರ್ ಅವರ ತೋಟಕ್ಕೆ ಹೋಗಿದ್ದೆ. ಜೀವಾಮೃತವನ್ನಷ್ಟೇ ಬಳಸುತ್ತಿರುವ ಅವರು ಹನ್ನೆರಡು ವರ್ಷಗಳಿಂದ ಮಣ್ಣಿಗೆ ರಾಸಾಯನಿಕ ಗೊಬ್ಬರವನ್ನೇ ಸೋಕಿಸಿಲ್ಲವಂತೆ. ಆದರೂ ಸಹ ಇತರೇ ಬೆಳೆಗಾರರಿಗಿಂತ 20-30% ಹೆಚ್ಚು ಫಸಲು ತೆಗೆಯುತ್ತಿದ್ದಾರಂತೆ. ಅಡಿಕೆಯ ನಡುವೆ  ಬೆಳೆದಿರುವ ಎರಡು ವರ್ಷ ವಯಸ್ಸಿನ ರೋಬಸ್ಟಾ ಕಾಫಿ ಗಿಡಗಳು ನಾಲ್ಕು ವರ್ಷದ ಗಿಡಗಳಂತೆ ಬೆಳೆದಿವೆ.  ಕಳೆ, ಕೀಟ ನಾಶಕಗಳನ್ನು ಬಳಸುವುದರಿಂದ ಕೇವಲ‌ ಕಳೆಯನ್ನಷ್ಟೇ ಅಲ್ಲ, ಕೀಟ ಜಗತ್ತನ್ನೇ ಸರ್ವನಾಶ ಮಾಡುತ್ತಿದ್ದೇವೆನ್ನುವ ಕಿಂಚಿತ್ತು ಅರಿವಿಲ್ಲದ ರೈತರ ಬಗ್ಗೆ ಅವರು ಆತಂಕಗೊಂಡರು.  ನಾನು ಬರೆದಿರುವುದನ್ನು ಓದುವ ಕೃಷಿಕರು ಒಂದು ಕ್ಷಣ ಆಲೋಚಿಸಿ ನೋಡಿ. ರಾಸಾಯನಿಕ ವಿಷವನ್ನು ಬಳಸಿ ನಾವು ಕೊಲ್ಲುತ್ತಿರುವುದಾದರೂ ಯಾವುದನ್ನು!?  ಕಳೆಗೆ ಸಿಂಪಡಿಸುವ ರಾಸಾಯನಿಕವು ಕಳೆಯಿಂದ ನೆಲಕ್ಕಿಳಿದು ಕಣ್ಣಿಗೆ ಕಾಣದ, ಜೀವ ವೈವಿಧ್ಯದ ಅಮೂಲ್ಯ ಭಾಗವಾದ ಲಕ್ಷಾಂತರ, ಕೋಟ್ಯಾಂತರ ಕ್ರಿಮಿ, ಕೀಟಗಳನ್ನು ಅನಾಮತ್ತು ಕೊಲ್ಲುತ್ತಿರುವುದರ ಬಗ್ಗೆ ಔಷಧಿಯ ಹೆಸರಿನಲ್ಲಿ ಹಣ್ಣು, ಸೊಪ್ಪು, ತರಕಾರಿಯಿಂದ್ಹಿಡಿದು ತಿನ್ನುವ ಅನ್ನಕ್ಕೂ ವಿಷವಿಕ್ಕುತ್ತಿರುವ ನಾವು ಯೋಚಿಸಿದ್ದೇವೆಯಾ ? ಯೋಚಿಸುತ್ತೇವೆಯಾ ?  ನಾವು ಔಷಧವೆಂದು ಬಳಸುತ್ತಿರುವ ರಾಸಾಯನಿಕವು ಔಷಧಿಯೇ ಆಗಿದ್ದಿದ್ದಲ್ಲಿ ನಮ್ಮ ತೋಟ, ನಮ್ಮ ಹೊ...

ಸಾಹಿತ್ಯದ ಆಯ್ಕೆಗಳು

 ಕೆಲವು ತಿಂಗಳ ಹಿಂದೆ ಫೇಸ್ಬುಕ್ ಸ್ನೇಹಿತರೊಬ್ಬರು ತಮ್ಮ ಹೊಸ ಪುಸ್ತಕದ ಬಗ್ಗೆ ಬರೆದುಕೊಂಡಿದ್ದರು. ಹೆಸರೇ ಒಂದು ರೀತಿ ವಿಶಿಷ್ಟವಾಗಿದ್ದುದರಿಂದ 'ಪುಸ್ತಕ ಎಲ್ಲಿ ಸಿಗುತ್ತದೆ?' ಎಂದು ಕೇಳಿದೆ. ಸಧ್ಯಕ್ಕೆ ಇ-ಬುಕ್ ನಲ್ಲಿದೆ ಓದಿ ಅಂದರು, ನನಗೆ ಇ-ಬುಕ್ ಆಗಿ ಬರುವುದಿಲ್ಲ ಪೇಪರ್ ಬ್ಯಾಕ್ (ಪುಸ್ತಕ) ಇದ್ದರೆ ಹೇಳಿ, ಅಂದೆ. ಸಧ್ಯಕ್ಕೆ ಪ್ರಿಂಟ್ ಆಗಿಲ್ಲ, ಆದಾಗ ತಿಳಿಸುತ್ತೇನೆ ಅಂದವರು ಮೊನ್ನೆ ಕಳುಹಿಸಿದ್ದಾರೆ. ಇವತ್ತು ಮನೆಗೆ ಬಂದಾಗ ಪುಸ್ತಕ ಟೀಫಾಯಿಯ ಮೇಲಿತ್ತು. ಓದಲು ಪ್ರಾರಂಭಿಸಿದ್ದೇನೆ, ನಿಜಕ್ಕೂ ಅದ್ಭುತವಾದ ಕಂಟೆಂಟ್.  ಪುಸ್ತಕದ ಬಗ್ಗೆ ಪೂರ್ತಿ ಓದಿದ ಮೇಲೆ ಬರೆಯುತ್ತೇನೆ. ಈಗ ಹೇಳ ಹೊರಟಿದ್ದು ಆ ವಿಚಾರವನ್ನಲ್ಲ. ಇತ್ತೀಚೆಗೆ ಗೆಳೆಯರೊಬ್ಬರೊಂದಿಗೆ ಮಾತನಾಡುತ್ತಾ "ನನಗೆ ಈ ಕಿಂಡಲ್, ಇ-ಬುಕ್ ಗಳಲ್ಲಿ ಓದಲಾಗುವುದಿಲ್ಲ ಮಾರಾಯ್ರೇ.. ಕೈಯ್ಯಲ್ಲಿ ಪುಸ್ತಕ ಹಿಡಿದು ಓದಿದರೆ ಮಾತ್ರ ಓದಿದ್ಹಂಗೆ ಅನಿಸುತ್ತೆ, ಹೀಗಾಗಿ ನನಗೆ ಪುಸ್ತಕವೇ ಹಿತ." ಅಂದಿದ್ದೆ. ಅದಕ್ಕವರು, ನೀವೇನ್ರೀ ಇನ್ನೂ ಯಾವ ಕಾಲದಲ್ಲಿದೀರೀ!? ಕನ್ನಡ ಸಾಹಿತ್ಯ ತಾಂತ್ರಿಕವಾಗಿ ಶ್ರೀಮಂತವಾಗಬೇಕೆಂದು ತೇಜಸ್ವಿಯವರೇ ಹೇಳಿದ್ದರು, ನೀವು ನೋಡಿದ್ರೆ ಅದೇ ಹಳೇ ಕತೆ ಹೇಳ್ತಿದೀರಲಾ... ಅಂದರು.  ಇದೊಳ್ಳೆ ಕತೆಯಾಯಿತಲ್ಲ! ನಾನು ತಾಂತ್ರಿಕವಾಗಿ ಶ್ರೀಮಂತವಾಗಬಾರದು ಅಂತೆಲ್ಲಿ ಹೇಳಿದೆ!?  ನನಗೆ ವೈಯಕ್ತಿಕವಾಗಿ, ಓದಲು ಪುಸ್ತಕವೇ ಇಷ್ಟ ಅಷ್ಟೇ ಅಂದುಕೊ...