ದೊಡ್ಡ ಮರವೊಂದರ ಒಣಗಿದ ಕೊಂಬೆಯ ತುದಿಯಲ್ಲಿ ಕುಳಿತು ಕೆಳಗಿನ ಹಳ್ಳದಲ್ಲಿ ಒಂದು ಮೀನಾದ್ರೂ ಮೇಲೆ ಬರುತ್ತೇನೋ ಎಂದು ಕಾಯುತ್ತಾ ಕುಳಿತಿರುತ್ತಿದ್ದ ಬೆಳ್ಳಕ್ಕಿಯೊಂದು ಕೆಳಗೆ ರಾಜಾರೋಷದಿಂದ ಓಡಾಡುತ್ತಾ ಶಿಕಾರಿ ಮಾಡುತ್ತಿದ್ದ ಹುಲಿಯನ್ನು ದಿನವೂ ನೋಡುತ್ತಾ ಹುಟ್ಟಿದ್ರೆ ಹುಲಿಯಾಗಿ ಹುಟ್ಬೇಕ್ ಗುರೂ ಎಂಥಾ ಸೌಭಾಗ್ಯನಪ್ಪಾ ಈ ಹುಲೀದೂ ಇಡೀ ಕಾಡೇ ಹೆದ್ರಿ ನಡುಗುತ್ತೆ ನಾನು ಒಂದು ಮೀನು ಹಿಡಿಯೋಕೆ ಈ ಒಣಗಿದ ಕೊಂಬೆಯ ತುದೀಲಿ ಬಿಸಿಲಲ್ಲಿ ಕಾಯ್ತಾ ಕೂರ್ಬೇಕು ಯಾರಿಗ್ ಬೇಕು ಈ ಕರ್ಮ ಮುಂದಿನ್ ಜನ್ಮದಲ್ಲಾದ್ರೂ ನನ್ನನ್ನ ಹುಲಿಯಾಗಿ ಹುಟ್ಸಪ್ಪಾ ದೇವ್ರೇ... ಎಂದು ದಿನವೂ ಬೇಡಿಕೊಳ್ಳುತ್ತಿತ್ತು. ಇತ್ತ ಹುಲಿ ಬಿರು ಬಿಸಿಲಿನಲ್ಲಿ ಕಾಡೆಲ್ಲಾ ಅಲೆದಾಡಿ ಸುಸ್ತಾಗಿ ಬಂದು ಮರದಡಿ ಮಲಗಿಕೊಂಡು ಮರದ ತುತ್ತ ತುದಿಯಲ್ಲಿ ಕುಳಿತು ಇಡೀ ಕಾಡನ್ನು ನೋಡುವ ಬೆಳ್ಳಕ್ಕಿಯನ್ನೇ ದಿನವೂ ದಿಟ್ಟಿಸುತ್ತಾ ' ಥೂ ಏನ್ ಹಾಳ್ ಜನ್ಮ ಗುರೂ ದಿನ ಬೆಳಗೆದ್ರೆ ಹೊಟ್ಟೆ ತುಂಬಿಸ್ಕಳಕೆ ಎಷ್ಟೆಲ್ಲಾ ಒದ್ದಾಡ್ಬೇಕು ಅದೇ ಈ ಬೆಳ್ಳಕ್ಕಿ ಯಾರ ಕೈಗೂ ಸಿಗದಂಗೆ ಅಷ್ಟೆತ್ತರದಲ್ಲಿ ಕೂತ್ಕಂಡು ಎಷ್ಟು ಸುಲಭವಾಗಿ ಮೀನು ಹಿಡಿಯುತ್ತಪ್ಪಾ... ಮುಂದಿನ್ ಜನ್ಮ ಅಂತಿದ್ದರೆ ಬೆಳ್ಳಕ್ಕಿಯಾಗಿ ಹುಟ್ಸಪ್ಪಾ ದೇವ್ರೇ... ಎಂದು ಕೇಳಿಕೊಳ್ಳುತ್ತಿತ್ತು.! ಮನುಷ್ಯನ ಆಲೋಚನೆಗೆ ಸಣ್ಣದೊಂದು ಉದಾಹರಣೆಯಷ್ಟೇ ಇದು. ನಾವು ನಮಗಿರುವ ಕಷ್ಟಗಳನ್ನು ನೆನೆದು ಅದರಿಂದ ಹೊರಬರಲಾಗದೇ ದಿನವೂ ಒಳಗ...